LOCAL NEWS : ಗವಿಮಠದ ದಾಸೋಹದಲ್ಲಿ ಲಕ್ಷಾಂತರ ಭಕ್ತರಿಂದ ಪ್ರಸಾದ ಸೇವನೆ..!!
ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಇಂದು (ದಿ16 ರಂದು) ಶ್ರೀ ಮಠದ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಪ್ರಸಾದ ಸವಿದಿದ್ದಾರೆ.
ಇಂದು ಮಹಾ ದಾಸೋಹದಲ್ಲಿ ರೊಟ್ಟಿ, ಹೆಸರುಕಾಳು ಪಲ್ಲೆ, ಬದನೆಕಾಯಿ ಪಲ್ಲೆ, ಮಿರ್ಚಿ, ಮಾದಲಿ, ತುಪ್ಪ, ಹಾಲು, ಜಿಲೇಬಿ, ಅನ್ನ, ಸಾಂಬಾರು, ಪುಡಿ, ಉಪ್ಪಿನಕಾಯಿ, ಕೆಂಪುಚಟ್ನಿ ವಿತರಿಸಲಾಯಿತು.