MISSING CASE : ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ..!
ಕೊಪ್ಪಳ : ಕೊಪ್ಪಳ ನಗರದ ಸಜ್ಜಿ ಓಣಿಯ ನಿವಾಸಿ 27 ವರ್ಷದ ಸಿದ್ದು ತಂದೆ ಶರಣಪ್ಪ ದೊಡ್ಡಮನಿ ಎಂಬ ಯುವಕನು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದದಾರೆ.
ಯುವಕನು 2024ರ ಜನವರಿ 12 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾನು ಶಿರಸಿಗೆ ಹೋಗಿ ಬರುವುದಾಗಿ ಹೇಳಿ ಹೋಗಿ ವಾಪಸ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಯುವಕನ ತಾಯಿ ದೇವವ್ವ ಶರಣಪ್ಪ ದೊಡ್ಡಮನಿ ಅವರು ದೂರು ನೀಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯ ಗುನ್ನೆ ನಂ: 115/2024 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವಕನು 5.6 ಅಡಿ, ಸಾದಾಗಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಹೊಂದಿದ್ದು,. ಕಪ್ಪು ತಲೆ ಕೂದಲು ಮತ್ತು ಕುರುಚಲು ಗಡ್ಡ ಹೊಂದಿರುತ್ತಾನೆ.
ಕಾಣೆಯಾದಾಗ ಬಿಳಿ ಬಣ್ಣದ ಅರ್ಧ ತೋಳಿನ ಟಿಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಈ ಯುವಕನು ಯಾರಿಗಾದರೂ ಕಂಡಲ್ಲಿ ಅಥವಾ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-230100 ಮತ್ತು 230222, ಕೊಪ್ಪಳ ನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಮೊ.ಸಂ: 9480803745, ನಗರ ಠಾಣೆಯ ಪೊಲೀಸ ಸಬ್ ಇನ್ಸಪೆಕ್ಟರ್ (ಕಾ&ಸು) ಮೊ.ನಂ 9449484086 ಮತ್ತು ನಗರ ಪೊಲೀಸ ಠಾಣೆಯ ದೂರವಾಣಿ ನಂ: 08539-220333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.