STATE NEWS: ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಪ್ರಮೋದ ಸೇರಿ 15 ಜನ ಆಯ್ಕೆ.

You are currently viewing STATE NEWS: ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಪ್ರಮೋದ ಸೇರಿ 15 ಜನ ಆಯ್ಕೆ.

ಕೊಪ್ಪಳದ ಪ್ರಜಾವಾಣಿ ವರದಿಗಾರ  ಪ್ರಮೋದ ಸೇರಿ ೧೫ ಜನರಿಗೆ ಸ್ವಾಮಿವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ
ಕೊಪ್ಪಳ: ಇಲ್ಲಿನ ಪ್ರಜಾವಾಣಿ ದಿನಪತ್ರಿಕೆ ಜಿಲ್ಲಾ ವರದಿಗಾರ ಪ್ರಮೋದ ಕುಲಕರ್ಣಿ ಸೇರಿ ದೇಶದ ೧೫ ಜನರಿಗೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಮತ್ತು ಬಿಜಾಪೂರ ಜಿಲ್ಲಾ ಘಟಕದಿಂದ ಕೊಡಮಾಡುವ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಮತ್ತು ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಅವರು ಫೆಬ್ರವರಿ ೫ ರಂದು ಬಿಜಾಪೂರ ಜಿಲ್ಲಾ ಮುದ್ದೆಬಿಹಾಳದಲ್ಲಿ ನಡೆಯುವ ವರ್ಣರಂಜಿತ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸದರಿ ಕಾರ್ಯಕ್ರಮಕ್ಕೆ ಅನೇಕ ಸಚಿವರು, ಶಾಸಕರು ಮತ್ತು ಸ್ವಾಮೀಜಿಗಳು ಹಾಗೂ ಸಿನೆಮಾ ಟಿವಿ ಕಲಾವಿದರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರು : ರಾಕೇಶ ಶರ್ಮಾ (ಮಧ್ಯಪ್ರದೇಶ), ಮುಕೇಶ್ ಠಾಕೂರ್ (ಜಾರ್ಖಂಡ್), ಪ್ರೊ. ತಮಿಳ್ ಸೆಲ್ವಿ (ತಮಿಳುನಾಡು), ಸಾದರ ನರೇಶ್ ಕುಮಾರ್ (ಮಹಾರಾಷ್ಟç), ಪ್ರಮೋದ ಕುಲಕರ್ಣಿ (ಕೊಪ್ಪಳ), ಡಾ. ಸೋಮಶೇಖರ ಡಿ. (ಕಲಬುರಗಿ), ಡಾ. ರಾಜು ಗುಂಡಾಪುರ (ರಾಮನಗರ), ಡಾ. ಶುಭ ನಂದೀಶ (ಕೋಲಾರ), ಪ್ರೊ. ಅಂಬಿಕಾ ಎ.ಆರ್. (ಬೆಂಗಳೂರು ಗ್ರಾ.), ಪ್ರೊ. ಮನೋಜ ಎಂ. (ಮಂಡ್ಯ), ಡಾ. ಕೆ. ಸಿ. ನಾಗರಜ್ಜೆ (ಹಾವೇರಿ) ಮತ್ತು ರಾಷ್ಟ್ರೀಯ ಜಾನಪದ ಶ್ರೀ ಪ್ರಶಸ್ತಿಗೆ ಬೆಂಗಳೂರು ನಗರ ಜಿಲ್ಲೆಯ ಕಡಬಗೆರೆ ಮುನಿರಾಜು ಮತ್ತು ತುಮಕೂರು ಜಿಲ್ಲೆಯ ಬಿ. ಸಿ. ಗಂಗಣ್ಣ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಾಮಾಜಿಕ ಕಳಕಳಿಯ ಬರಹ, ಚಿಂತನಾ ಲೇಖನ, ಪತ್ರಿಕೋದ್ಯಮ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಪ್ರಮೋದ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜಾಪೂರ ಜಿಲ್ಲಾ ಅಧ್ಯಕ್ಷ ಪುಂಡಲೀಕ ಮುರಾಳ ಅವರು ತಿಳಿಸಿದ್ದಾರೆ.

Leave a Reply

error: Content is protected !!