LOCAL BREAKING : ಹಲಗೆರಿ ಬಳಿ ಭೀಕರ ಅಪಘಾತ : ಬೈಕ್ ಸವಾರ ಸಾವು..!!

You are currently viewing LOCAL BREAKING : ಹಲಗೆರಿ ಬಳಿ ಭೀಕರ ಅಪಘಾತ : ಬೈಕ್ ಸವಾರ ಸಾವು..!!

ಕೊಪ್ಪಳ : ಕೊಪ್ಪಳ ತಾಲೂಕಿನ ಹಲಗೇರಿಯ ಎನ್ ಎಚ್ ಎಫ್ 56 ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಬಂಧಿಸಿದ್ದು, ಈ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕುಕನೂರು ತಾಲೂಕು ಮನ್ನಾಪುರ ಗ್ರಾಮದಲ್ಲಿ ಮಣ್ಣಿನ ಕಾರ್ಯಕ್ಕೆ ಹೋಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದಲಾಗಿದೆ. ಹಲಗೇರಿ ಬಳಿ ಮೃತನು ಬೈಕ್ ಸೈಡ್ ಹಾಕಿ ಫೋನಲ್ಲಿ ಮಾತನಾಡುತ್ತಾ ನಿಂತಿದ್ದನು, ತತಕ್ಷಣ ಹಿಂದೆಯಿಂದ ಬಂದ ಇನ್ನೊಂದು ಬೈಕ್ ವೇಗವಾಗಿ ಹೊಡೆದ ಪರಿಣಾಮ ವ್ಯಕ್ತಿ ಸಾವನಪ್ಪಿದ್ದಾನೆ. ಈ ಘಟನೆ ಸಂಭವಿಸಿದ ಬಳಿಕ ಇಬ್ಬರು ಬೈಕ್ ಸವಾರರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತನು ಅಖಿಲ್ ಸಾಬ್ ಆರಿಹಾಳ ಎಂದು ಗುರುತಿಸಲಾಗಿದೆ. ಈತನು ಗಂಗಾವತಿ ತಾಲೂಕಿನ ಆರೀಹಾಳ್ ಗ್ರಾಮದ ನಿವಾಸಿಯಾಗಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಪೊಲೀಸರು ಬಂದು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು ತನಿಖೆ ನಡೆಸಿದ್ದಾರೆ.

Leave a Reply

error: Content is protected !!