LOCAL NEWS : ಆಕಸ್ಮಿಕ ಬೆಂಕಿ ಅವಘಡದಿಂದ ಮನೆ ಸಂಪೂರ್ಣವಾಗಿ ಸುಟ್ಟು ಅಪಾರ ಹಾನಿ.!
ಲಕ್ಷ್ಮೇಶ್ವರ : ತಾಲೂಕಿನ ಬಟ್ಟೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಮನೆ ಸಂಪೂರ್ಣವಾಗಿ ಸುಟ್ಟು ಅಪಾರ ಹಾನಿವಾಗಿರುವ ಘಟನೆ ಜರಗಿದೆ.
ಬಟ್ಟೂರು ಗ್ರಾಮದ ಚನ್ನಬಸವ್ವ , ಫಕ್ಕೀರಪ್ಪ ಬಾರ್ಕಿ ಎಂಬು ಎಂಬವರ ಮನೆ ಸಂಪೂರ್ಣ ಸುಟ್ಟ ಕರಕಲಾಗಿದೆ. ಮನೆಯಲ್ಲಿನ ಚಿನ್ನ, ಬೆಳ್ಳಿಯ ಆಭರಣಗಳು, ಕಟ್ಟಿಗೆ ಪೀಠೋಪಕರಣಗಳು, ಕಪಾಟುಗಳು, ದವಸ ಧಾನ್ಯಗಳು, ಪಾತ್ರೆಗಳು, ಕೃಷಿ ಸಲಕರಣೆಗಳು ಸೇರಿದಂತೆ ಲಕ್ಷಾಂತರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅಗ್ನಿ ಶಾಮಕ ಕರೆ ಮಾಡಿದಾಗ ತಡವಾಗಿದ್ದ ಕಾರಣ ಗ್ರಾಮಸ್ಥರೆ ಬೆಂಕಿ ನಿಂದಿಸಲು ಮುಂದಾಗಿದ್ದಾರೆ.
ಎರಡಮೂರು ದಿನದ ಹಿಂದೆ ಸಂಘದಲ್ಲಿ ಸಾಲ ಮಾಡಿದ್ದ ಹಣವು ಮನೆಯಲ್ಲಿ ಇದ್ದವು ಅದು ಬೆಂಕಿ ಸುಟ್ಟಿದೆ. ನಾವು ಕುಲಿ ಕೆಲಸಕ್ಕೆ ಹೋಗಿದ್ವೀ ಯಾವ ರೀತಿ ಬೆಂಕಿ ತಾಗಿದೆ ಗೊತ್ತಾಯಿಲ್ಲ ಈ ಘಟನೆ ನಡೆದಿದೆ.. ನಾವು ಈ ಗುಡಿಸಿನಲ್ಲಿ ಜೀವನ ಮಾಡುತ್ತಿದ್ದು 15 ವರ್ಷ ಕಳೆದರು ನಮಗೆ ಆಶ್ರಯ ಮನೆ ಹಾಕಿಲ್ಲ ಎಂದು ಮನೆ ಮಾಲಿಕ ಫಕ್ಕಿರಪ್ಪ ಕಣ್ಣಿರು ಹಾಕಿದರು.
ಸರ್ಕಾರ ಬಡವರಿಗಾಗಿ ಆಶ್ರಯ ಮನೆ ನೀಡಲಾಗುತ್ತದೆ ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಇಂತವರಿಗೆ ಮನೆಗಳು ಯಾಕೆ ಕೊಡುವದಿಲ್ಲ ಇದು ವಿಪರ್ಯಾಸವೇ ಸರಿ.. ಇಗಲಾದರೂ ಇಂತಹ ಬಡವರನ್ನು ಗುರುತಿಸಿ ಆಸ್ರಯ ಮನೆಗಳನ್ನು ಕೊಡಿ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೆ.
ವರದಿ: ವೀರೇಶ್ ಗುಗರಿ