LOCAL NEWS : ರೈತ ಸಂಘದ ತಾಲೂಕ ಅಧ್ಯಕ್ಷರಾಗಿ ದೇವಪ್ಪ ಸೋಬಾನದ ಪದಗ್ರಹಣ.

You are currently viewing LOCAL NEWS : ರೈತ ಸಂಘದ ತಾಲೂಕ ಅಧ್ಯಕ್ಷರಾಗಿ ದೇವಪ್ಪ ಸೋಬಾನದ ಪದಗ್ರಹಣ.

ರೈತ ಸಂಘದ ತಾಲೂಕ ಅಧ್ಯಕ್ಷರಾಗಿ ದೇವಪ್ಪ ಸೋಬಾನದ ಪದಗ್ರಹಣ 

ಕುಕನೂರು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಅಧ್ಯಕ್ಷರಾಗಿ ಪಟ್ಟಣದ ದೇವಪ್ಪ ಸೋಬಾನದ ಪದಗ್ರಹಣ ಪಡೆದರು.

ನೂತನ ಕೂಕನೂರು ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಘಟಕ ಹಾಗೂ ನಗರ ಘಟಕದ ಪದಾಧಿಕಾರಿಗಳ ಪದ ಗ್ರಹಣ ಕಾರ್ಯಕ್ರಮವು ಪಟ್ಟಣದ ಅನ್ನದಾನೀಶ್ವರ ಮಠದ ಆವರಣದಲ್ಲಿ ರವಿವಾರ ನೆಡೆಯಿತು.

ಕಾರ್ಯಕ್ರಮದ ಪೂರ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೈತ ಸಂಘದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯನ್ನು ನೆಡೆಸಿದರು.

ವೇದಿಕೆ ಕಾರ್ಯಕ್ರಮಕ್ಕೆ ರೈತ ಸಂಘದ ರಾಜ್ಯಾಧ್ಯಕ್ಷರಾದ ವಿ.ಆರ್.ನಾರಾಯಣರಡ್ಡಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಅನ್ನದಾನೀಶ್ವರ ಮಠದ ಡಾ.ಮಹದೇವ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಡಾ. ಮಲ್ಲಿಕಾರ್ಜುನ ಬಿನ್ನಾಳ, ಬಸಲಿಂಗಪ್ಪ ಭೂತೆ, ಶರಣಬಸನಗೌಡ ಹೊರಪೇಟೆ, ರೈತ ಸಂಘದ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರಡ್ಡಿ ಮಾತನಾಡಿದರು. ಡಾ.ಮಹದೇವ ಮಹಾಸ್ವಾಮಿಗಳು ನೀಡಿದರು.

ರೈತ ಸಂಘದ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರಡ್ಡಿ ರೈತ ಸಂಘದ ಪ್ರಮಾಣ ವಚನ ನೀಡುವ ಮೂಲಕ ನೂತನ ಕುಕನೂರು ಘಟಕ ಹಾಗೂ ಕುಕನೂರು ನಗರ ಘಟಕದ ರೈತ ಸಂಘಟನೆಯ ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮದ ರೈತ ಸಂಘಗಳನ್ನು ಉದ್ಘಾಟನೆಗೊಳಿಸಿದರು.

ತಾಲೂಕ ಘಟಕದ ಅಧ್ಯಕ್ಷರಾಗಿ ದೇವಪ್ಪ ಸೋಬಾನದ ಹಾಗೂ ನಗರ ಘಟಕದ ಅಧ್ಯಕ್ಷರಾಗಿ ಶಿವು ಬಂಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಈಶಪ್ಪ ಸಬರದ, ಬಸವರಾಜ ದಿವಟರ ಹಾಗೂ ಸಂಘದ ಸದಸ್ಯರು ಪದಗ್ರಹಣ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ವೀರಯ್ಯ ತೋಂಟದಾರ್ಯಮಠ, ಸಯ್ಯದಸಾಬ ಮುಲ್ಲಾ, ವೆಂಕರಡ್ಡಿ ಚುಕ್ಕನಕಲ್ಲ, ಮಂಜುನಾಥ ಚಟ್ಟಿ, ಮಲ್ಲಿಕಾರ್ಜುನಗೌಡ ಪಾಟೀಲ, ಗೋವಿಂದರಡ್ಡಿ, ಯಲ್ಲಪ್ಪ ಬಾಬರಿ, ಕಳಕಪ್ಪ ಕ್ಯಾದಗುಂಪಿ ಹಾಗೂ ರೈತ ಸಂಘದ ಪ್ರಮುಖರು ಮತ್ತು ಇತರರಿದ್ದರು

Leave a Reply

error: Content is protected !!