LOCAL EXPRESS : ಬೃಹತ್ ಲಾರಿ ಪಲ್ಟಿ : ತಪ್ಪಿದ ಭಾರಿ ಅನಾಹುತ..!!
ಕೊಪ್ಪಳ : ಕುಕನೂರು ತಾಲೂಕಿನ ಕುದರಿಮೋತಿ ಕ್ರಾಸ್ ದಿಂದ ಮ್ಯಾದನೆರಿ ಕ್ರಾಸ್ ರಸ್ತೆಯ ಮದ್ಯದಲ್ಲಿ ರಸಗೊಬ್ಬರ ತುಂಬಿದ ಬೃಹತ್ ಲಾರಿಯೊಂದು ನೆಲಕ್ಕೆ ಉರಳಿದೆ. ಬೈಕ್ ಹಾಗೂ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ರಾತ್ರಿ 8:50 pm ಕ್ಕೆ ಕುಕನೂರು ತಾಲೂಕಿನ ಕುದರಿಮೋತಿ ಕ್ರಾಸ್ ದಿಂದ 700m/ 800 ಮ್ಯಾದನೆರಿ ಕ್ರಾಸ್ ಕೊಪ್ಪಳದಲ್ಲಿ ರಸಗೊಬ್ಬರದ ಲೋಡ್ ಆಗಿದ್ದ ಬೃಹತ್ ಗಾತ್ರದ ಲಾರಿಯೊಂದು ಮುದ್ದೇಬಿಹಾಳ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.
ಈ ವೇಳೆ ರಸ್ತೆಯು ಸ್ವಲ್ಪ ಕಿರಿದಾಗಿದ್ದು, ಎದುರುಗಡೆಯಿಂದ ಬೈಕ್ ಸವಾರನ ದಾರಿ ಮಾಡಿಕೊಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಕ್ಕೆ ಬಾರದ ಬೃಹತ್ ಗಾತ್ರದ ಲಾರಿ ರಸ್ತೆಯಿಂದ ಕೆಳೆಗಿಳಿದು ಜಮೀನಿನಲ್ಲಿ ಪಾರ್ಟಿಯಾಗಿದೆ ಎಂದು ತಿಳಿದು ಬಂದಿದೆ. ಚತ್ಕಾರದಂತೆ ಬೈಕ್ ಹಾಗೂ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯು ಯಲಬುರ್ಗಾ ತಾಲೂಕಿನ ಬೇವುರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಡಿದೆ. ಇನ್ನೇನು ಪ್ರಕರಣ ದಾಖಲಾಗಬೇಕಿದೆ.