BREAKING : ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ಕು ಮಂದಿ ಸೇರಿ 30 ಜನ ಮೃತ..!!
ಲಕ್ನೋ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ 30 ಜನರಲ್ಲಿ ಬೆಳಗಾವಿಯ ಜಿಲ್ಲೆಯ ನಾಲ್ಕು ಜನರು ಸೇರಿದ್ದಾರೆ ಎಂದು ಮಾಹಿತ ಬಂದಿದೆ.
ಈ ಮೃತರು ಧಾರ್ಮಿಕ ಸಭೆಗೆ ಪ್ರಯಾಣಿಸಿದ್ದ 30 ಸದಸ್ಯರ ಗುಂಪಿನ ಭಾಗವಾಗಿದ್ದರು ಎಂಬ ಮಾಹಿತಿ ಇದೆ. ಬೆಳಗಾವಿ ಪೊಲೀಸ್ ಕಮಿಷನರ್ ಇಡಾ ಮಾರ್ಟೀನ್ ಅವರು ಸಾವುಗಳನ್ನು ದೃಢಪಡಿಸಿದ್ದು, “ಪೊಲೀಸರು, ಸ್ಥಳೀಯ ಆಡಳಿತ ಮತ್ತು ಮೃತರ ಕುಟುಂಬ ಸದಸ್ಯರಿಂದ ಅಧಿಕೃತ ಮಾಹಿತಿ ಬಂದಿದೆ.
ಮೃತರನ್ನು ವಡಗಾವಿಯ ಜ್ಯೋತಿ ಹತ್ರವಾಡ್ (44), ಅವರ ಮಗಳು ಮೇಘಾ (24), ಶೆಟ್ಟಿ ಗಲ್ಲಿಯ ಅರುಣ್ ಕೋಪರ್ಡೆ (61) ಮತ್ತು ಶಿವಾಜಿ ನಗರದ ಮಹಾದೇವಿ ಬಾವನೂರ (48) ಎಂದು ಗುರುತಿಸಲಾಗಿದೆ.