*ಕಲಬುರಗಿ : ಉಚ್ಚ ಶಿಕ್ಷಣಮತ್ತು ಶೋಧ ಸಂಸ್ಥಾನ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಚೆನ್ನೈ ಧಾರವಾಡ ಕೇಂದ್ರ ದ ಸಹಾಯಕ ಹಿಂದಿ ವಿಭಾಗದಲ್ಲಿ ಪೂರ್ಣಕಾ ಲಿಕ ಪಿಎಚ್.ಡಿ. ಸಂಶೋ ಧಕ ಲಾಡ್ಲೆಮಶಾಕ ಪೀರಾ ಸಾಹೇಬ ನದಾಫ ಅವರು ಮಂಡಿಸಿದ “ಗ್ರಾಮೀಣ ವಿಕಾಸ್ ಮೇ ಜನಸಂಚಾರ ಮಾಧ್ಯಮೋ ಕಾ ಯೋಗ ದಾನ, ಹಿಂದಿ ಔರ ಕನ್ನಡಕೇ ವಿಶೇಷ ಸಂದರ್ಭ ಮೇ “ಎಂಬ ಮಹಾ ಪ್ರಬಂಧಕ್ಕೆ ಡಿಬಿಎಚ್‌ಪಿ ಸಭಾ ಧಾರವಾಡ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಯಿತು .
ಇವರು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದವರು.
ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮೊಹ ಮ್ಮದ್ ಇಸಾಕ್ ಸನ್ನಕ್ಕಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದರು.