LOCAL NEWS : ಕವಿರಾಜ ಮಾರ್ಗ ಕೃತಿಯಲ್ಲಿ ಅನೇಕ ಚಾರಿತ್ರಿಕ ಸಂಗತಿಗಳು ಗೋಚರವಾಗುತ್ತವೆ : ಬಸವರಾಜ ಕೊಡುಗುಂಟಿ          

ಕೊಪ್ಪಳ : ಕವಿರಾಜ ಮಾರ್ಗ ಜಗತ್ತಿನ ಮೊಟ್ಟ ಮೊದಲ ವಿಧ್ವತ್ತಿನ ಕೃತಿ . ಇದು ಅಲಂಕಾರ ಗ್ರಂಥವಾಗಿದ್ದರೂ ವ್ಯಾಕರಣ , ಛಂದಸ್ಸು , ಕನ್ನಡವನ್ನು ಮಾತನಾಡುವ ಸಮಾಜ, ಸಂಸ್ಕೃತಿ ಇವುಗಳ ಮೇಲೆ ಬೆಳಕು ಚೆಲ್ಲುವ ಮಹತ್ವ ಪೂರ್ಣ ಕೃತಿಯಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜ ಕೊಡಗುಂಟಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸಗೈದರು. ಮುಂದುವರಿದು ಕವಿರಾಜ ಮಾರ್ಗಕಾರ ಶ್ರೀವಿಜಯನಿಗೆ ಸಂಸ್ಕೃತ ವಿದ್ವಾಂಸರಾದ ದಂಡಿ ಮತ್ತು ಬಾಮಹ ಪ್ರೇರಕರಾಗಿದ್ದರು. ಇವರಿಬ್ಬರ ಪ್ರಭಾವವೇ ಶ್ರೀವಿಜಯನಲ್ಲಿ ಬಂದು ಕವಿರಾಜಮಾರ್ಗ ರಚಿಸುವಲ್ಲಿ ಸಾಧ್ಯವಾಗಿದೆ.

ಈ ಮಹತ್ವಪೂರ್ಣ ಕೃತಿಯಲ್ಲಿ ಅಂದಿನ ಸಮಾಜ, ಜನರ ಜೀವನ ಕ್ರಮ, ಸಂಸ್ಕೃತಿಗಳೆಲ್ಲವು ಅಡಕವಾಗಿರುತ್ತದೆ. ಅಲ್ಲದೇ ಅನೇಕ ಚಾರಿತ್ರಿಕ ಸಂಗತಿಗಳು ಗೋಚರವಾಗುತ್ತವೆ. ವಿದ್ಯಾರ್ಥಿಗಳು ಈ ಕೃತಿಯನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದರು. ಅಧ್ಯಕ್ಷತೆಯನ್ನು ವಹಿಸಿ ಪ್ರಾಂಶು ಪಾಲರಾದ ತಿಮ್ಮಾರೆಡ್ಡಿ ಮೇಟಿ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅರಿತುಕೊಳ್ಳುವ ದಿಸೆಯಲ್ಲಿ ಕವಿರಾಜಮಾರ್ಗ ಕೃತಿಯು ತನ್ನ ಸಾರ್ಥಕತೆಯನ್ನು ಪಡೆದುಕೊಂಡಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನು ಕನ್ನಡ ಪ್ರಾಧ್ಯಾಪಕರು ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಡಾ. ಭಾಗ್ಯ ಜ್ಯೋತಿ ಮಾತನಾಡಿದರು. ಕನ್ನಡ ಉಪನ್ಯಾಸಕರಾದ ಡಾ. ತುಕಾರಾಂ ನಾಯ್ಕ, ಡಾ.ಬೋರೇಶ, ಡಾ. ವಿಪ್ಲವಿ, ಡಾ. ಅನ್ನಪೂರ್ಣ ಹಾಗೂ ಭಂಡಾರ ಪ್ರಕಾಶನದ ಪರಶುರಾಮ ಕೋಡಗುಂಟಿ ಇದ್ದರು.

ಸ್ವಾಗತವನ್ನು ಉಪನ್ಯಾಸಕರಾದ ಡಾ. ನಾಗರಾಜ ದೊರೆ , ಅತಿಥಿಗಳ ಪರಿಚಯವನ್ನು ಸೋಮೇಶ್ ಉಪ್ಪಾರ್ , ವಂದನಾರ್ಪಣೆಯನ್ನು ಡಾ. ಪ್ರಕಾಶ ಬಳ್ಳಾರಿ , ನಿರೂಪಣೆಯನ್ನು ಮಹಾಂತೇಶ್ ನೆಲಾಗಣಿ ನೆರವೇರಿಸಿದರು. ಸಮಾರಂಭದಲ್ಲಿ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಇದ್ದರು.

ವರದಿ : ರಾಧಾ ಕರ್ಕಿಹಳ್ಳಿ

Leave a Reply

error: Content is protected !!