LOCAL NEWS : ಮಕ್ಕಳಲ್ಲಿ ವಚನ ಸಾಹಿತ್ಯದ ತಿಳುವಳಿಕೆ ಮೂಡುವ ಕಾರ್ಯವಾಗಲಿ : ಕೆ.ಬಿ. ಬ್ಯಾಳಿ
ಕುಕನೂರು : ಮಕ್ಕಳಲ್ಲಿ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸಲು ಶಾಲಾ ಪಠ್ಯಗಳಲ್ಲಿ ವಚನ ಸಾಹಿತ್ಯದ ಅದ್ಯಾಯಗಳನ್ನು ಹೆಚ್ಚಾಗಿ ಸೇರಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ ಕೆ ಬಿ ಬ್ಯಾಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ನ ಪ್ರಥಮ ಸಭೆಯಲ್ಲಿ ಅವರು ಮಾತನಾಡಿದರು.
ವಚನ ಸಾಹಿತ್ಯ ವಿಶ್ವ ಬ್ರಾತೃತ್ವದ ದಿವ್ಯ ಸಾಹಿತ್ಯವಾಗಿದೆ. ಇಂದಿನ ಪೀಳಿಗೆಗೆ ವಚನ ಸಾಹಿತ್ಯದ ತಿಳುವಳಿಕೆ ಮತ್ತು ಪ್ರಭಾವ ಹೆಚ್ಚಿಸಲು ಪಠ್ಯದಲ್ಲಿ ಅಧ್ಯಯನಗಳನ್ನು ಸೇರಿಸಬೇಕು. ವಚನಗಳನ್ನು ಸರ್ವರಿಗೂ ತಿಳಿಸಲು ವಚನ ಪರಿಷತ್ ಮುಂದಿನ ದಿನಗಳಲ್ಲಿ ಶಾಲೆಗೊಂದು ವಚನ ಸಾಹಿತ್ಯ ಕಾರ್ಯಕ್ರಮ ಆಯೋಜಿಸಿದರೆ ಉತ್ತಮ ಎಂದು ಹೇಳಿದರು.
ಜೀವನದ ನೀತಿ ನಿಯಮಗಳನ್ನು ಶರಣರ ವಚನಗಳಲ್ಲಿ ಕಾಣಬಹುದು. ಮೆಕ್ಯಾಲೆ ಇಂಗ್ಲಿಷ್ ಶಿಕ್ಷಣ ಪದ್ಧತಿ ದೇಶದಲ್ಲಿ ವ್ಯಾಫಿಸಿದಂತೆ ವಚನಗಳು ಇಂದಿನ ಯುವ ಪೀಳಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವ ಕಾರ್ಯಕ್ರಮಗಳನ್ನು ವಚನ ಪರಿಷತ್ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕ, ಸಾಹಿತಿ ಶರಣಪ್ಪ ರಾವಣಕಿ ಮಾತನಾಡಿ, ಪ್ರತೀ ಗ್ರಂಥಾಲಯದಲ್ಲಿ ವಚನ ಪುಸ್ತಕಗಳು ಹೆಚ್ಚು ಲಭ್ಯವಾಗಬೇಕು. ಯುವ ಪೀಳಿಗೆಗೆ ವಚನಗಳ ಬಗ್ಗೆ ಅರಿವು ಮೂಡಿಸಲು ಪರಿಷತ್ ನಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಗುವುದು ಎಂದರು.
ಈ ಸಂದರ್ಭದಲ್ಲಿ ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಈರಯ್ಯ ಕುರ್ತಕೋಟಿ, ನಿವೃತ್ತ ಶಿಕ್ಷಕರು, ಸಾಹಿತಿಗಳಾದ ನಿಂಗಪ್ಪ ತಟ್ಟಿ, ಆದುನಿಕ ವಚನ ಸಾಹಿತಿ, ಶಿಕ್ಷಕ ಬಸವರಾಜ್ ಉಪ್ಪಿನ್, ಪೀರ್ ಸಾಬ್ ದಫೆದಾರ್, ಉಮೇಶ್ ಕಂಬಳಿ, ಶಂಭು ಅರಿಶಿನದ, ಚಂದ್ರು ದೊಡ್ಡಮನಿ, ತಿಪ್ಪಣ್ಣ ಹೊಸಮನಿ, ಅಡಿವೆಪ್ಪ ಬೋರಣ್ಣವರ, ಪತ್ರಕರ್ತ ಚಂದ್ರು ಬನಾಪುರ, ವಿಶ್ವನಾಥ್ ಪಟ್ಟಣಶೆಟ್ಟಿ, ಇತರರು ಉಪಸ್ಥಿತರಿದ್ದರು.