ಶಿರಹಟ್ಟಿ: ತಾಲೂಕು ಹೆಬ್ಬಾಳ ಗ್ರಾಮದಲ್ಲಿ ಗೀತಾ ನವಲಿ ಎಂಬ ರೈತ ಮಹಿಳೆ ಜಮೀನಿನಲ್ಲಿ ಇರುವ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಆಕಳು ಹಾಗೂ ಕರು ಸುಟ್ಟು ಹೋಗಿವೆ.ಅದರಲ್ಲಿದ್ದ ನಾಲ್ಕು ಚೀಲ ತೊಗರಿ 10 ಕ್ವಿಂಟಲ್ ಈರುಳ್ಳಿ ದನಕರುಗಳಿಗೆ ತೆಗೆದಿಟ್ಟ 4 ಗಾಡಿ ಮೇವು ಶೇಂಗಾ ಹೊಟ್ಟು ಹತ್ತು ಚೀಲ ರಸಗೊಬ್ಬರ ಇನ್ನು ಇತ್ಯಾದಿ ಸಾಮಗ್ರಿಗಳು ಸುಟ್ಟು ಬಸ್ಮವಾಗಿ ಹೋಗಿವೆ.
ಅಲ್ಲದೇ ಅದರ ಪಕ್ಕದಲ್ಲಿರುವ ರೇಷ್ಮೆ ಶೆಡ್ಡಿಗೂ ಕೂಡ ಬೆಂಕಿ ತಗೂಲಿ ರೇಷ್ಮೆ ಗೂಡುಗಳಿಗೂ ಸಹಿತ ಸುಟ್ಟು ಕರಕಲಾಗಿವೆ.
ರೈತ ಮಹಿಳೆಯ ಆಕ್ರಂದನ ಮುಗಿಲು ಮುಟ್ಟಿತ್ತು ಈ ಮಹಿಳೆಗೆ ಸರ್ಕಾರ ದಿಂದ ಸೂಕ್ತ ಪರಿಹಾರ ಒದಿಗಿಸಬೇಕೆಂದು ಜನರು ಮಾತನಾಡುತ್ತಿದ್ದರು.
ವರದಿ: ವೀರೇಶ್ ಗುಗ್ಗರಿ