ಕವಿ ಬರಹಗಾರರಿಗೆ ಕಲ್ಪನಾ ಶಕ್ತಿಯೇ ಆಸ್ತಿ: ಕೆ.ವೈ.ನಾರಾಯಣಸ್ವಾಮ
ದಾವಣಗೆರೆ: ಕವಿ ಹಾಗೂ ಬರಹಗಾರರಿಗೆ ಕಲ್ಪನಾ ಶಕ್ತಿಯ ಆಸ್ತಿ ಎಂದು ನಾಟಕಕಾರ ವಿಮರ್ಶಕ ಕೆ ವೈ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಕೊಂಡಜ್ಜಿ ಸ್ಕೌಟ್ ಕ್ಯಾಂಪ್ ನಲ್ಲಿ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ. ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಕಾಲ ನಡೆಯಲಿರುವ ವೃತ್ತಿರಂಗ ನಾಟಕ ರಚನಾ ಶಿಬಿರಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
FLASH NEWS : ಪ್ರಾಥಮಿಕ ಹಂತದ ಶಿಕ್ಷಣದಲ್ಲಿಯೇ ಸಹಕಾರಿ ಆಂದೋಲನದ ಮಾಹಿತಿ ತಿಳಿಸಬೇಕು : ಸಹಕಾರ ಸಚಿವ ಕೆ.ಎನ್.ರಾಜಣ್ಣ
ಯುವ ಬರಹಗಾರರು ಹೆಚ್ಚೆಚ್ಚು ಕಥೆ ಕವನ ಸಂಕಲಗಳನ್ನು ಓದಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ. ಕವಿ ಹಾಗೂ ಬರಹಗಾರರಿಗೆ ಕಲ್ಪನಾ ಶಕ್ತಿಯೇ ಆಸ್ತಿಯಾಗಿದೆ. ಬರಹಗಾರರು ಯಾವಾಗಲೂ ಕ್ರಿಯಾಶೀಲಾಗಿರಬೇಕು ಎಂದರು.
ದಾವಣಗೆರೆಯ ರಂಗಾಯಣ ನಿರ್ದೇಶಕರಾದ ಮಲ್ಲಿಕಾರ್ಜುನ್ ಕಡಗೋಳ ಮಾತನಾಡಿ ವೃತ್ತಿ ರಂಗ ನಾಟಕ ತರಬೇತಿಯು ಐದು ದಿನಗಳ ಕಾಲ ನಡೆಯಲಿದೆ. ಶಿಬಿರದಲ್ಲಿ ಅನೇಕ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ ಇದರ ಸದುಪಯೋಗವನ್ನು ಎಲ್ಲ ಶಿಬಿರಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ನಿರೂಪಣೆಯನ್ನು ಶೃತಿರಾಜ್ ದಾವಣಗೆರೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕರಾದ ಬಸವರಾಜ ಪಂಚಗಲ್, ಡಾ. ಶಿವನಗೌಡ ಹಾಗೂ ಇತರರಿದ್ದರು.