LOCAL NEWS : ಕುಕನೂರಿನಲ್ಲಿ ಇಂದು ಸಹಕಾರ ಜಾಗೃತ ಸಮಾವೇಶ.

You are currently viewing LOCAL NEWS : ಕುಕನೂರಿನಲ್ಲಿ ಇಂದು ಸಹಕಾರ ಜಾಗೃತ ಸಮಾವೇಶ.

ಪ್ರಜಾವೀಕ್ಷಣೆ ಸುದ್ದಿ :-

LOCAL NEWS : ಕುಕನೂರಿನಲ್ಲಿ ಇಂದು ಸಹಕಾರ ಜಾಗೃತ ಸಮಾವೇಶ

ಕೊಪ್ಪಳ : ಕುಕನೂರು ಪಟ್ಟಣದಲ್ಲಿ ಇಂದು ಸಹಕಾರ ಜಾಗೃತ ಸಮಾವೇಶ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಸಹಕಾರ ಸಚಿವರು ಸೇರಿ ಬಹುತೇಕ ವಿವಿಧ ಇಲಾಖೆಗಳ ಸಚಿವರು ಪಾಲ್ಗೋಳ್ಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾ ಹಾಲು ಉತ್ಪಾದರ ಸಹಕಾರ ಸಂಘಗಳ ಒಕ್ಕೂಟ ನಿ, ಬಳ್ಳಾರಿ ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ, ರಾಯಚೂರು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ, ಕೊಪ್ಪಳ, ಸಹಕಾರ ಇಲಾಖೆ ಕೊಪ್ಪಳ ಹಾಗೂ ಕುಕನೂರು ಮತ್ತು ಯಲಬುರ್ಗಾ ವಿವಿಧ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕುಕನೂರು ಪಟ್ಟಣದ ಎಪಿಎಮ್‌ಸಿ ಆವರಣದಲ್ಲಿ ಸಹಕಾರ ಜಾಗೃತ ಸಮಾವೇಶ ಜರುಗಲಿದೆ.

ಈ ಸಹಕಾರಿ ಜಾಗೃತಿ ಸಮಾವೇಶವೂ ಮೊಟ್ಟಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಬಹುತೇಕ ಸಚಿವರುಗಳು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಮಾವೇಶದಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಅಧ್ಯಕ್ಷ ಜಿ ಟಿ ದೇವೇಗೌಡ, ಕೆ ಎಂ ಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹಾಗೂ ಸಂಸದ ರಾಜಶೇಖರ್ ಹಿಟ್ನಾಳ ಅವರು ಇನ್ನು ಅನೇಕ ಸಹಕಾರಿ ದುರಿಣರು ಭಾಗಿಯಾಗಳಿದ್ದಾರೆ.

ಸಹಕಾರ ಜಾಗೃತ ಸಮಾವೇಶದಲ್ಲಿ ಕಲಬುರಗಿ ಪ್ರಾಂತಕ್ಕೆ ಒಳಪಡುವ ಸಹಕಾರ ಸಂಘಗಳ ಸದಸ್ಯರುಗಳು ಹಾಗೂ ಸಂಘದ ಆಡಳಿತಮಂಡಳಿತ ಸದಸ್ಯರುಗಳು ಭಾಗವಹಿಸಿಲಿದ್ದಾರೆ.

ಸಮಾವೇಶದಲ್ಲಿ ಜಿಲ್ಲೆಯ 600 ಹೆಚ್ಚು ಸಹಕಾರಿ ಸಂಘ ಹಾಗೂ 74ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಘದ ಸದಸ್ಯರುಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಸುಮಾರು 6000 ಜನ ಸೇರುವ ನಿರೀಕ್ಷೆ ಇದೆ.

ಸಹಕಾರಿ ಸಂಘಗಳಿಂದ ಸದಸ್ಯರುಗಳಿಗೆ ಇವರ ಸೌಲಭ್ಯಗಳ ಮಾಹಿತಿ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳಿಗೆ ಮತ್ತು ಅಡಳಿತ ವರ್ಗದವರಿಗೆ ಅವರ ಕರ್ತವ್ಯಗಳ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

Leave a Reply

error: Content is protected !!