LOCAL NEWS : ಕುಕನೂರು ಪಟ್ಟಣದಲ್ಲೊಂದು ಬಾಲ್ಯ ವಿವಾಹ ಪ್ರಕರಣ ದಾಖಲೆ..!: ಇದರಲ್ಲಿ ತಪ್ಪು ಯಾರದ್ದು..?

You are currently viewing LOCAL NEWS : ಕುಕನೂರು ಪಟ್ಟಣದಲ್ಲೊಂದು ಬಾಲ್ಯ ವಿವಾಹ ಪ್ರಕರಣ ದಾಖಲೆ..!: ಇದರಲ್ಲಿ ತಪ್ಪು ಯಾರದ್ದು..?

ಪ್ರಜಾವೀಕ್ಷಣೆ ನ್ಯೂಸ್‌ ಡೆಸ್ಕ್‌ :

LOCAL NEWS : ಕುಕನೂರು ಪಟ್ಟಣದಲ್ಲೊಂದು ಬಾಲ್ಯ ವಿವಾಹ ಪ್ರಕರಣ ದಾಖಲೆ..!: ಇದರಲ್ಲಿ ತಪ್ಪು ಯಾರದ್ದು..?

ಕುಕನೂರು : ಕಳೆದ ಕೆಲ ದಿನಗಳ ಹಿಂದೆ ಕುಕನೂರು ಪಟ್ಟಣದ ಬಾಲಕಿಯೊಬ್ಬಳನ್ನು ವಿಜಯನಗರ ಜಿಲ್ಲೆಯಲ್ಲಿರುವ ಗ್ರಾಮವೊಂದರ ದೇವಸ್ಥಾನದಲ್ಲಿ ಕುಟುಂಬಸ್ಥರು ಸೇರಿ ಬಾಲ್ಯವಿವಾಹ ಮಾಡಿಸಿದ್ದಾರೆ ಎಂಬ ಮಾಹಿತಿ ತಿಳಿದು ಯಲಬುರ್ಗಾ ಶಿಶು ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕುಕನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಕಳೆದ ಕೆಲ ದಿನಗಳ ಹಿಂದೆ ಕುಕನೂರು ಪಟ್ಟಣದ ಬಾಲಕಿಯನ್ನು ಪಕ್ಕದ ಜಿಲ್ಲೆ ವಿಜಯನಗರದಲ್ಲಿರುವ ತಮ್ಮ ಸಂಬಂಧಿಕನ ಜೊತೆ ಮದುವೆ ಮಾಡಿಕೊಡಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ತಪ್ಪಿತಸ್ಥರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

ಈ ಪ್ರಕರಣದಲ್ಲಿ ಪ್ರಮುಖವಾಗಿ ತಪ್ಪಾಗಿದ್ದು, ಆ ಬಾಲಕಿಯ ಪೋಷಕರು ಮತ್ತು ಆಕೆಯನ್ನು ಮದುವೆಯಾದ ಹುಡುಗ ಹಾಗೂ ಅವನ ಕಡೆಯವರಿಂದ ಎನ್ನುವುದು ಬಹಳ ಸ್ಪಷ್ಟವಾಗಿದೆ. ಆದರೆ, ಈ ಎರಡು ಕುಟುಂಬಗಳಿಗೆ ಕಾನೂನಿನ ಅರಿವು ಹಾಗೂ ಬಾಲ್ಯ ವಿವಾಹದ ವಿಷಯದ ಬಗ್ಗೆ ತಿಳಿಯದಿರುವುದು ವಿಪರ್ಯಾಸವೇ ಸರಿ ಎನ್ನಬಹುದು.

ಈ ಬಗ್ಗೆ ಒಬ್ಬ ಉನ್ನತ ಮಟ್ಟದ ಅಧಿಕಾರಿಯನ್ನು ವಿಚಾರಿಸಲಾಗಿ, ಅವರ ಹೇಳಿಕೆಯಂತೆ ‘ಈ ಪ್ರಕರಣದಲ್ಲಿ ಬಹಳ ಮುಖ್ಯವಾಗಿ ಕೆಲವೊಂದು ಪ್ರಮುಖ ಕಾನೂನುಗಳ ಬಗ್ಗೆ ಕುಟುಂಬಸ್ಥರಿಗೆ ಅರಿವಿಲ್ಲದಿರುವುದು ಎದ್ದು ಕಾಣುತ್ತದೆ. ಇವತ್ತಿನ ದಿನಮಾನದಲ್ಲಿ ಎಂತಹ ವ್ಯಕ್ತಿಗಳೇ ಆಗಲಿ ಸಮುದಾಯಗಳಾಗಲಿ ಬಾಲ್ಯ ವಿವಾಹ ಮತ್ತು ಕೆಲವು ಅನಿಷ್ಟ ಪದ್ದತಿಗಳ ಬಗ್ಗೆ ಅರಿವು ಇದ್ದೇ ಇರುತ್ತದೆ. ಸದ್ಯದ ಪ್ರಕರಣವನ್ನು ಕುಲಂಕುಶವಾಗಿ ವಿಚಾರಿಸಿದಾಗ ಗೊತ್ತಾದ ನಿಜಾಂಶ  ಏನಂದರೆ, ಇಂತಹ ಅನಿಷ್ಟ ಪದ್ದತಿಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ ಅನಿಸುತ್ತದೆ’ ಎಂದು ತಮ್ಮ ವ್ಯಯಕ್ತಿಕ ಹೇಳಿಕೆಯನ್ನು ಪ್ರಜಾವೀಕ್ಷಣೆ ಟೀಂ ಜೊತೆಗೆ ಹಂಚಿಕೊಂಡರು.

ಒಬ್ಬ ಅಧಿಕಾರಿ ಈ ಮಾತನ್ನು ಹೇಳುತ್ತಿದ್ದಾರೆ ಅಂದರೆ, ಇತ್ತೀಚಿನ ದಿನಮಾನದಲ್ಲಿ ಬಾಲ್ಯ ವಿವಾಹ ಅನ್ನೋದು ಬಹಳಷ್ಟು ವಿರಳ ಆದರೂ, ಸಹಿತ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಾವೆ ಎಂದರೆ ಅದಕ್ಕೆ ಪ್ರಮುಖ ಕಾರಣ, ಅನಿಷ್ಟ ಪದ್ಧತಿಗಳ ಬಗ್ಗೆ ಜಾಗೃತಿ ಹಾಗೂ ಅರಿವು ಮಾಡದಿರುವ ಇಲಾಖೆಯ ಹಾಗೂ ಅಧಿಕಾರಿಗಳೇ ನೇರ ಕಾರಣ ಎನ್ನುವುದು ಎಂದು ಕೆಲ ಪ್ರಜ್ಞಾವಂತ ಪ್ರಜೆಗಳ ಅಭಿಪ್ರಾಯವಾಗಿದೆ.

ಈ ಪ್ರಕರಣದಲ್ಲಿ ತಿಳಿದೊನೋ ಅಥವಾ ತಿಳಿದು ತಪ್ಪಾಗಿರುವುದು ಹೌದು, ಸಮಾಜದಲ್ಲಿ ಇಂಥ ಪ್ರಕರಣಗಳು ನಡೆಯಲೇಬಾರದು. ಆದರೆ ಇಂತಹ ಪ್ರಕರಣಗಳಲ್ಲಿ ಪೂರ್ವ ತಯಾರಿ ನಡೆಯುತ್ತಿರುವಾಗಲೇ ಈ ಬಾಲ್ಯ ವಿವಾಹವನ್ನು ತಡೆಯಬಹುದಿತ್ತು. ಇಂತಹ ಪ್ರಕರಣಗಳನ್ನು ನಡೆಯದಂತೆ ನೋಡಿಕೊಳ್ಳವ ತಂಡದ ಅಧಿಕಾರಿಗಳ  ಬೇಜವಾಬ್ದಾರಿ ಹಾಗೂ ನಿರ್ಲಕ್ಷತನವೇ ಎದ್ದು ತೋರುತ್ತದೆ. 

Leave a Reply

error: Content is protected !!