ಗಜೇಂದ್ರಗಡ: ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ತಾಲೂಕು ಪಂಚಾಯತ ನರೇಗಾ ಸಹಾಯಕ ನಿರ್ಧೇಶಕರಾದ ವಾಸುದೇವ ಪೂಜಾರ ಹೇಳಿದರು.
ಗಜೇಂದ್ರಗಡ ತಾಲೂಕಿನ ರಾಂಪೂರ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಡಗಾನೂರು ಗ್ರಾಮದಲ್ಲಿ ಜಲಸಂಜೀವಿನಿ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಮತದಾನ ಜಾಗೃತಿ ಮೂಡಿಸಿ.
ದೇಶದಲ್ಲಿಯೇ ಅತಿದೊಡ್ಡ ಸಂವಿಧಾನ ಹೊಂದಿರುವ ಭಾರತದಲ್ಲಿ ಚುನಾವಣೆ ಪಾತ್ರ ಮಹತ್ವದ್ದಾಗಿದೆ. ಮತದಾರ ಜಾಗೃತಿ ಆಗದಿದ್ದರೆ ದೇಶದ ಭವಿಷ್ಯ ಸರಿಯಾದ ದಿಕ್ಕಿನಲ್ಲಿ ಸಾಗುವುದಿಲ್ಲ. ಜನರಿಂದ ಜನರಿಗಾಗಿ ಸರಕಾರವಿದ್ದು, ಸರಕಾರ ಆಯ್ಕೆ ಮಾಡುವ ಹಕ್ಕು ಜನರಿಗೆ ನೆರವು. ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಕರೆ ಮಾಡಿ.
ಉತ್ತಮ ನಾಳೆಗಾಗಿ ಮತದಾನ ಮಾಡುವ ಮೂಲಕ ಎಲ್ಲ ಅರ್ಹ ನಾಗರಿಕರು ಮತದಾನದ ಹಕ್ಕು ನೀಡಬೇಕು. ಮತದಾರನ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಬುನಾದಿಯನ್ನು ದೃಢಪಡಿಸಿ ಎಂದು ಹೇಳಿದರು.
ಇದೇ ವೇಳೆ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪಿಡಿಒ ಎಸ್.ಎಸ್. ಕಡಬಲಕಟ್ಟಿ ಮಾತನಾಡಿ, ಬೇಸಿಗೆಯಲ್ಲಿ ಸ್ಥಳೀಯವಾಗಿ ಕೆಲಸವಿಲ್ಲದೆ ಗುಳಿ ಹೋಗುವುದನ್ನು ತಡೆಗಟ್ಟಲು ನೆರೇಗಾ ಯೋಜನೆಯಲ್ಲಿ ಎರಡು ತಿಂಗಳ ಕಾಲ ನಿರಂತರ ಕೆಲಸ ಮಾಡಬೇಕು. ಪ್ರತಿಯೊಬ್ಬ ಕೂಲಿಕಾರರು ಅಳತೆಗೆ ತಕ್ಕಂತೆ ಕಟ್ಟೆ ಕಡೆಯಬೇಕು. ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಪ್ರಾಥಮಿಕ ಚಿಕಿತ್ಸ ಪೆಟ್ಟಿಗೆಯನ್ನು ಸಹ ಒದಗಿಸಲಾಗಿದೆ.
ಈ ಸಂದರ್ಭದಲ್ಲಿ ಐಐಸಿ ಸಂಯೋಜಕರಾದ ಮಂಜುನಾಥ ಹಳ್ಳದ, ತಾಂತ್ರಿಕ ಸಹಾಯಕರಾದ ನವೀನ್ ಬಸರಿ, ಗ್ರಾ.ಪಂ. ಕಾರ್ಯದರ್ಶಿ ಮಾಬುಸಾಬ ಗೋಡಕಾರ, ಬಿಎಫ್ ಟಿ ರವಿ ಹೊಂಬಳ, ಗ್ರಾಮ ಕಾಯಕ ಮಿತ್ರ ಕವಿತಾ ಹಿರೇಮಠ, ಗ್ರಾ.ಪಂ. ಸಿಬ್ಬಂದಿಗಳಾದ ಬಸವರಾಜ ಸೇರಿದಂತೆ ಇತರರು.
ವರದಿ : ಕುಮಾರ ಗೌರಿಮಠ. ಗ,ಗಡ