ಜೆಡಿಎಸ್ ಯಲಬುರ್ಗಾ ತಾಲೂಕು ಅಧ್ಯಕ್ಷರಾಗಿ ಉತ್ಸಾಹಿ ಯುವ ಮುಖಂಡ ಬಸವರಾಜ್ ಗುಳಗುಳಿ ನೇಮಕ.!!!
ಯಲಬುರ್ಗಾ : ಪ್ರದೇಶ ಜನತಾದಳ ಜಾತ್ಯತೀತ ( ಜೆಡಿಎಸ್ ) ಯಲಬುರ್ಗಾ ತಾಲೂಕು ಅಧ್ಯಕ್ಷರಾಗಿ ಯುವ ಮುಖಂಡ ಬಸವರಾಜ್ ಗುಳಗುಳಿ ನೇಮಕವಾಗಿದ್ದಾರೆ.
ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುರೇಶ್ ಎಸ್ ಭೂಮರೆಡ್ಡಿ ಅವರು ಬಸವರಾಜ್ ಗುಳಗುಳಿ ಅವರನ್ನು ಯಲಬುರ್ಗಾ ತಾಲೂಕು ಜಾತ್ಯತೀತ ಜನತಾ ದಳ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ನೂತನ ತಾಲೂಕು ಅಧ್ಯಕ್ಷರಾಗಿ ನೇಮಕವಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ಗುಳಗುಳಿ, ಪಕ್ಷವು ಅಧ್ಯಕ್ಷ ಸ್ಥಾನದ ಗುರುತರ ಜವಾಬ್ದಾರಿ ನೀಡಿದ್ದು ಸಮರ್ಥವಾಗಿ ನಿಭಾಯಿಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿ ಜಿಲ್ಲಾ ಅಧ್ಯಕ್ಷ ಸುರೇಶ್ ಭೂಮರೆಡ್ಡಿ, ರಾಜ್ಯ ಜೆಡಿಎಸ್ ನಾಯಕರಿಗೆ ಕೃತಜ್ಞತೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಜಾತ್ಯತೀತ ಜನತಾ ದಳ ಪಕ್ಷವು ಕನ್ನಡ ನಾಡಿನ ನೆಲ, ಜಲ, ಭಾಷೆ, ರಕ್ಷಣೆಯ ವಿಷಯದಲ್ಲಿ ಸದಾ ಹೋರಾಟ ಮಾಡುತ್ತದೆ. ಪ್ರಾದೇಶಿಕ ಜನತಾ ದಳ ಪಕ್ಷವು ಕನ್ನಡಿಗರ ಹಿತ ಕಾಯುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ನಿಲ್ಲುತ್ತದೆ, ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷದ ಪರ್ವ ಕಾಲ ಬಂದೇ ಬರುತ್ತದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ, ಮಾರ್ಗದರ್ಶನಡಂತೆ ಜಿಲ್ಲೆ ತಾಲೂಕು ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸುತ್ತೇವೆ ಎಂದರು.
ಸದ್ಯ ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಬಸವರಾಜ್ ಗುಳಗುಳಿ ಹೇಳಿದ್ದಾರೆ