LOCAL NEWS : ಸದ್ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ 286 ನೇ ಜಯಂತಿ ಆಚರಣೆ.
ಕುಕನೂರು : ಬಂಜಾರ ಸಮುದಾಯದ ಧರ್ಮ ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ 286 ನೇ ಜಯಂತಿಯನ್ನು ತಹಸೀಲ್ದಾರ್ ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪ ತಹಸೀಲ್ದಾರ್ ಮುರಳೀಧರ ಕುಲಕರ್ಣಿ ಅವರು ಸಂತ ಶ್ರೀ ಸೇವಾಲಾಲ್ ಅವರು ನಾಡಿನ ಉದ್ದಗಲಕ್ಕೂ ಸಂಚರಿಸಿ ಧರ್ಮ ಬೋಧನೆ ಮೂಲಕ ಬಂಜಾರ ಸಮಾಜದ ಉದ್ದಾರಕ್ಕೆ ಕಾರಣರಾದರು. ಅಂತಹ ಮಹನೀಯ ಸಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಜಯಂತಿ ಪ್ರಯುಕ್ತ ಬಂಜಾರ ಸಮುದಾಯದ ಪ್ರಮುಖರಿಂದ ಸೇವಾಲಾಲ್ ವೃತ್ತದಲ್ಲಿ ವಿಶೇಷ ಪೂಜೆ, ಹವನ ಮಾಡಿ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ ಸ್ಮರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಮುರಳೀಧರ ಕುಲಕರ್ಣಿ, ಶಿರಸ್ತೆದಾರ್ ಮುಸ್ತಫಾ, ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ, ಗ್ರಾಮ ಪಂಚಾಯತ್ ಸದಸ್ಯ ಯಮನೂರಪ್ಪ ಕಟ್ಟಿಮನಿ, ಬಂಜಾರ ಸಮಾಜದ ಪ್ರಮುಖರಾದ ದೇವೇಂದ್ರಪ್ಪ ರಾಠೋಡ್, ಹಂಪಣ್ಣ ನಾಯಕ್, ಬಸವಂತಪ್ಪ ಕಟ್ಟಿಮನಿ, ಜಿತೇಂದ್ರ ನಾಯಕ,ಯಲ್ಲಪ್ಪ ಕಾರಭಾರಿ, ಯಮನೂರಪ್ಪ ಬಾನಾಪುರ, ಪರಸಪ್ಪ ಕಾರಭಾರಿ, ಪ್ರಕಾಶ್ ಬಳಗೇರಿ, ಕಿರಣ್ ರಾಠೋಡ್, ವಿಶ್ವನಾಥ್ ಕುಣಿಕೇರಿ, ಯಮನೂರಪ್ಪ ಕಾರಭಾರಿ, ಭಜನಾ ಮಂಡಳಿಯವರು, ಇತರರು ಉಪಸ್ಥಿತರಿದ್ದರು.