ಹೆಬ್ಬಾಳ ಗ್ರಾಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತ ಎನ್ ದೊಡ್ಡಮನಿ ಭೇಟಿ.
ಶಿರಹಟ್ಟಿ : ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಆಕಸ್ಮಿಕ ಬೆಂಕಿ ತಗುಲಿ 45 ರಿಂದ 50 ಬಣವಿ ಸುಟ್ಟ ಘಟನೆ ನೆಡೆದಿತ್ತು. ವಿಷಯ ತಿಳಿದು ಗ್ರಾಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಜಾತ ಎನ್ ದೊಡ್ಡಮನಿ ಅವರು ಇಂದು ಭೇಟಿ ನೀಡಿ ರೈತರೊಂದಿಗೆ ಮಾಹಿತಿ ಪಡೆದು ಮಾನ್ಯ ಸಚಿವರ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.
5
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಡಿ.ಕೆ.ಹೊನ್ನಪ್ಪನವರ, ರುದ್ರಗೌಡ ಪಾಟೀಲ್, ಮುತ್ತಣ್ಣ ಮುಂಡವಾಡ, ಪಿ.ಎಸ್.ಐ ಚನ್ನಯ್ಯ ದೇವೂರು, ಅನಿಲ್ ಮುಂಡವಾಡ, ಗೋವಿಂದಪ್ಪ ಬಂಡಿ, ಆನಂದ ಕೋಳಿ, ಮಲ್ಲಪ್ಪ ಹೂಯಿಲಗೊಳ, ದುರ್ಗಪ್ಪ ಬಂಡಿ, ಆನಂದ ಕಣಕೆ, ಹಾಗೂ ಗ್ರಾಮದ ರೈತ ಮುಖಂಡರು ಹಾಗೂ ಇತರರಿದ್ದರು.