FLASH NEWS : ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್ .

You are currently viewing FLASH NEWS :  ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್ .

ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್.

ಕೊಪ್ಪಳ : ತಾಲೂಕಿನ ಅಳವಂಡಿ ಬಳಿಯ ಹಟ್ಟಿ-ಹೈದರ್ ಗ್ರಾಮಗಳ ಮಧ್ಯೆ ಚಾಲಕ ನಿಯಂತ್ರಣ ತಪ್ಪಿ ಕೊಪ್ಪಳ ಘಟಕಕ್ಕೆ ಸೇರಿದ ಕೆಎಸ್ಸಾರ್ಟಿಸಿ ಬಸ್ ಪಲ್ಟಿಯಾಗಿದೆ.
ಎಂದಿನ0ತೆ ಸಂಚರಿಸುತ್ತಿದ್ದ ಬಸ್ ಇಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಪಲ್ಟಿಯಾದ ಘಟನೆ ನೆಡೆದಿದೆ. ಘಟನೆಯಲ್ಲಿ ಸುಮಾರು ೩೦ ರಿಂದ ೩೫ ಶಾಲಾ ವಿಧ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಳಕ್ಕೆ ಕೊಪ್ಪಳ ಡಿಡಿಪಿಐ ಶ್ರೀಶೈಲ್ ಬಿರಾದರ್, ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಾಕಿರ್ ಹುಸೇನ್. ಕೊಪ್ಪಳ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೋಮಶೇಖರ್ ಹರ್ತಿ. ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶರಣಬಸವನಗೌಡ. ಸರಕಾರಿ ನೌಕರರ ಸಂಘದ ಸದಸ್ಯರಾದ ಶ್ರೀ ಎಸ್’ಬಿ ಕುರಿ. ಹಿರಿಯ ಶಸ್ತ್ರಚಿಕಿತ್ಸಕರಾದ ಶ್ರೀ ಕೃಷ್ಣ ಓಂಕಾರ್, ಕಿಮ್ಸ್ ಸದಸ್ಯರಾದ ಸಲೀಂ ಅಳವಂಡಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

Leave a Reply

error: Content is protected !!