ಬಜೆಟ್ ನಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ ಭಹಪೂರ ಕೊಡುಗೆ: ಸುಧೀರ ಕೋರ್ಲಳ್ಳಿ
ಯಲಬುರ್ಗ: ಸಿ.ಎಂ. ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ ಭಹಪೂರ ಕೊಡುಗೆ ನೀಡಲಾಗಿದೆ ಎಂದು ಯಲಬುರ್ಗಾ ತಾಲೂಕ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಸುಧೀರ್ ಕೊರ್ಲಳ್ಳಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಯಶಸ್ವಿ ಬಜೆಟ್ ಮಂಡನೆಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರ ವಿಶೇಷ ಸಲಹೆ ಸಹಕಾರ ಸಾಕ್ಷಿಯಾಗಿದೆ ಎಂದು ಅವರು, ಬಸವರಾಜ ರಾಯರೆಡ್ಡಿಯವರ ಪ್ರಯತ್ನದ ಫಲದಿಂದ ಯಲಬುರ್ಗಾ- ಕುಕನೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆಯಾಗಿದೆ. ಯಲಬುರ್ಗಾ ಅಭಿವೃದ್ದಿ ಪರ್ವ ನಿರಂತರವಾಗಿ ಮುಂದುವರೆದಿದೆ ಎಂದರು.

ಯಲಬುರ್ಗಾ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಘೋಷಣೆಯಾದ ಅನುದಾನ ವಿವರ ಹೀಗಿದೆ.
01) ಯಲಬುರ್ಗಾ ಪಟ್ಟಣದ ಸಂಗೊಳ್ಳಿ ರಾಯಣ್ಣಯವರ ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ 6 ಕೋಟಿ ಅನುದಾನ.
02) ಯಲಬುರ್ಗಾ ಪಟ್ಟಣದಲ್ಲಿ ಸುಮಾರ 6 ಕೋಟಿ ವೆಚ್ಚದಲ್ಲಿ BSC ನರ್ಸಿಂಗ್ ಕಾಲೇಜ್ ಸ್ಥಾಪನೆ.
03) ಕುಕನೂರು ಪಟ್ಟಣದಲ್ಲಿ ಸುಮಾರು 42 ಕೋಟಿ ವೆಚ್ಚದಲ್ಲಿ ನೂತನ ನೂರು ಹಾಸಿಗೆ ತಾಲೂಕು ಆಸ್ಪತ್ರೆ ನಿರ್ಮಾಣ.
04) ಮ್ಯಾದನೇರಿ ಟು ಕಾತ್ರಾಳ ಕ್ರಾಸ್ ಹಾಗೂ ಬೇವಿನಕಟ್ಟಿ ಕ್ರಾಸ್ (45) ಕೀ ಮಿ ರಸ್ತೆ ನಿರ್ಮಾಣ ಅಂದಾಜು 254 ಕೋಟಿ.
05) ಕುಕನೂರಿನ ತಾಲೂಕಿನ ವೀರಾಪೂರ ಗ್ರಾಮದ ಹಿರೇಹಳ್ಳದ ಹೂಳೆತ್ತುವ ಕಾರ್ಯಕ್ಕೆ ಸುಮಾರು 60 ಕೋಟಿ ಮೀಸಲು.
06) ಕುಕನೂರಿನ ಪಟ್ಟಣದಲ್ಲಿ 9 ಕೋಟಿ ವೆಚ್ಚದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ.
07) ಕುಕನೂರು ತಾಲೂಕಿನ ತಳಕಲ್ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ (GTTC) 90 ಕೋಟಿ
08) ಕುಕನೂರು ಪಟ್ಟಣದಲ್ಲಿ ಸುಮಾರ 30 ಕೋಟಿ ವೆಚ್ಚದಲ್ಲಿ ನೂತನ ಪ್ರಜಾಸೌಧ ನಿರ್ಮಾಣಕ್ಕೆ ಬಜೆಟ್ ನಲ್ಲಿ ಘೋಷಣೆ ಹೀಗೆ ವಿವಿಧ ಯೋಜನೆಗಳು ಕ್ಷೇತ್ರಕ್ಕೆ ಅಭಿವೃದ್ಧಿಗೆ ಮೈಲುಗಲ್ಲಾಗಿವೆ ಎಂದಿದ್ದಾರೆ.