ನವದೆಹಲಿ : ಈ ಹಿಂದೆ 2004 ರಿಂದ 2014 ರವರೆಗೆ ಅಧಿಕಾರಾವಧಿಯಲ್ಲಿ 10 ಬಾರಿ ತ್ರಿವರ್ಣ ಧ್ವಜವನ್ನು ಹಾರಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರದಾನಿ ಮೋದಿ ಅವರು ಹಿಂದಿಕ್ಕಿದ್ದಾರೆ. ಇದರರ ಜೊತೆಗೆ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ನಂತರ ಸ್ವಾತಂತ್ರ್ಯ ದಿನಾಚರಣೆಯಂದು hhರಾಗಿದ್ದಾರೆ.
ಭಾರತದ ಮೊದಲ ಪ್ರಧಾನಿ ನೆಹರೂ ಸತತ 17 ಭಾಷಣಗಳನ್ನು ಮಾಡಿದ್ದರೆ, 1966 ರಿಂದ 1977 ರವರೆಗೆ ಮತ್ತು ಬಳಿಕಕ 1980 ರಿಂದ 1984 ರವರೆಗೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಸ್ವಾತಂತ್ರ್ಯ ದಿನದಂದು 16 ಬಾರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.
2014 ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೋದಿಯವರ ಮೊದಲ ಸ್ವಾತಂತ್ರ್ಯ ದಿನಾಚರಣೆಯ ಭಾಷಣವಾಗಿತ್ತು, ಈ ಸಮಯದಲ್ಲಿ ಅವರು ‘ಸ್ವಚ್ಛ ಭಾರತ’ ಮತ್ತು ‘ಜನ್ ಧನ್’ ಖಾತೆಗಳಂತಹ ಹಲವಾರು ಉಪಕ್ರಮಗಳನ್ನು ಘೋಷಿಸಿದ್ದರು.