ಅಲ್ಪ ಸಂಖ್ಯಾತರ ತುಷ್ಟೀಕರಣದ ಬಜೆಟ್. ಇದು ಕೇವಲ ಮೈಸೂರು ಭಾಗಕ್ಕೆ ಸೀಮಿತವಾಗಿದೆ. ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ ಅಲ್ಪ ಸಂಖ್ಯಾತರ ತುಷ್ಟೀಕರಣದ ಬಜೆಟ್ ಆಗಿದೆ. ಇದರು ಸಂಪೂರ್ಣವಾಗಿ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾದಂತಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಪ್ರತಿಕ್ರಿಯೇ ನೀಡಿದ್ದಾರೆ.
ಬಜಟ್ ಕುರಿತು ಪ್ರತಿಕ್ರಿಯೇ ನೀಡಿರುವ ಅವರು, ರಾಜ್ಯದ ೩೧ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತ ಬಜೆಟ್ ಮಂಡನೆಯಾಗಿಲ್ಲ. ಹೆಚ್ಚು ಅನುದಾನ, ಯೋಜನೆಗಳನ್ನು ಮೈಸೂರಿನ ಪಾಲು ಮಾಡಿಕೊಳ್ಳುವ ಮೂಲಕ ಸಿದ್ದರಾಮಯ್ಯ ಅವರು ಉಳಿದ ಜಿಲ್ಲೆಗಳಿಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ, ಅಲ್ಪ ಸಂಖ್ಯಾತರ ತುಷ್ಠಿಕರಣ ಸದರಿ ಬಜೆಟ್ ಮೂಲಕ ಕಂಡು ಬರುತ್ತಿದೆ. ಹೆಸರಿಗೆ ಮಾತ್ರ ಬಜೆಟ್ ನಲ್ಲಿ ಸರ್ವ ಜನಾಂಗಕ್ಕೂ ನ್ಯಾಯ ಒದಗಿಸುವ ಬಜೆಟ್ ಇದಾಗಿದೆ ಎನ್ನುವ ವ್ಯಾಖ್ಯವಾಗಿದೆ. ಆದರೆ, ವಾಸ್ತವದಲ್ಲಿಲ್ಲ ಎನ್ನುವುದು ಗಮರ್ನಾಹ ಸಂಗತಿ. ಕೇವಲ ಒಂದು ವರ್ಗ ಓಲೈಸುವುದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಎಂದುಕೊAಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತೆ ಅನ್ಯಾಯ ಮಾಡಲಾಗಿದೆ. 371 – ಜೆ ಹೋರಾಟದ ಫಲವಾಗಿ ದೊರೆತ ಕಲ್ಯಾಣ ಕರ್ನಾಟಕ ಭಾಗಕ್ಕೆ ಒಟ್ಟು ಅನುದಾನ ಕ್ರೂಢಿಕರಿಸಿ, ಬಿಡುಗಡೆ ಮಾಡುವುದು ಬಿಟ್ಟು ಹಂಚಿಕೆ ಮಾಡಲಾಗಿದೆ,
ಒಟ್ಟಿನಲ್ಲಿ ಈ ಬಜೆಟ್ ಕೇವಲ ಅಲ್ಪಸಂಖ್ಯಾತರ ಹಾಗೂ ಮೈಸೂರು ಭಾಗಕ್ಕೆ ಸೀಮಿತವಾದಂತೆ ಕಾಣುತ್ತಿದೆ ಎಂದು ಪ್ರತಿಕ್ರಿಯೇ ನೀಡಿದ್ದಾರೆ.