ಕೊಪ್ಪಳ : ಕುರಿ ಸಾಕಾಣಿಕೆ ಮತ್ತು ಇತರೆ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಕೊಡಿಸುವುದಾಗಿ ಹಣ ವಸೂಲಿ ಕರೆಗಳಿಗೆ ಸ್ಪಂದಿಸದಿರಿ ಎಂದು ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ ಹೆಚ್.ನಾಗರಾಜ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಎನ್.ಜಿ.ಓ. ಸಂಸ್ಥೆ ಎಂದು ಸಾರ್ವಜನಿಕರಿಗೆ ದೂರವಾಣಿ ಕರೆ ಮಾಡಿ ಕುರಿ ಸಾಕಾಣಿಕೆ ಮತ್ತು ಇತರೆ ಯೋಜನೆಗಳಲ್ಲಿ ಸಾಲ ಸೌಲಭ್ಯಕೊಡುವುದಾಗಿ ನಂಬಿಸಿ, ಬ್ಯಾಂಕ್ ಖಾತೆ ಅಥವಾ ಯು.ಪಿ.ಐ ಮೂಲಕ ಪಾವತಿಸುವಂತೆ ತಿಳಿಸಿ ಹಣ ವಸೂಲಿ ಮಾಡಲಾಗುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ತಿಳಿದುಬಂದಿರುತ್ತದೆ.
ಈ ತರಹದ ಯಾವುದೇ ಕರೆಗಳನ್ನು ಪಶು ಇಲಾಖೆಯಿಂದ ಮಾಡಲಾಗುತ್ತಿರುವುದಿಲ್ಲ. ಆದ್ದರಿಂದ ಜಿಲ್ಲೆಯ ರೈತರು, ಸಾರ್ವಜನಿಕರು ಈ ತರಹದ ಯಾವುದೇ ಕರೆಗಳನ್ನು ನಂಬಿ ತಮ್ಮ ಹಣವನ್ನು ನೀಡಬಾರದು.
ಕುರಿ ಸಾಕಾಣಿಕೆ ಅಥವಾ ಯಾವುದೇ ಯೋಜನೆಗಳಲ್ಲಿ ಸಾಲ ಮತ್ತು ಸಹಾಯಧನ ಕೊಡುಸುವುದಾಗಿ ಕರೆಗಳು ಬಂದಲ್ಲಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗೆ ಸಂಪರ್ಕಿಸಿ, ಖಚಿತಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರ ಕಚೇರಿಯ ಪ್ರಕಟಣೆ ತಿಳಿಸಿದೆ.