ಕನಕಗಿರಿ : ತಾಲೂಕಿನ ನವಲಿ ತಾಂಡದಲ್ಲಿ ಶ್ರೀ ತುಳಜಾಭವಾನಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾ ಮಾತಾ ಯುವಕರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿ ಕಾರ್ಯಕ್ರಮವು ಇಂದು ನಡೆಯಿತು.
*10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳು*
ಶೇಕಡಾ 91 % ಲೋಕೇಶ್ ತಿರುಪತಿ, ಶೇಕಡಾ 89ರಷ್ಟು ಅಂಕ ಪಡೆದ ವೆಂಕಟೇಶ್ ಹಾಗೂ ಶಿಲ್ಪಾ ಕುಮಾರ್ ಅವರುಶೇಕಡಾ 86 ಪಡೆದಿದ್ದಾರೆ.
*PUC ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳು*
ಕುಮಾರಿ ಶಕುಂತಲಾ ಶೇಕಡಾ 91, ಕುಮಾರಿ ಲಕ್ಷ್ಮಿ ಶೇಕಡಾ 90, ಕುಮಾರಿ ಸುಸ್ಮಿತಾ ಶೇಕಡಾ 68 ಅಂಕ ಪಡೆದ್ದಿದ್ದಾರೆ.
*ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳು*
ಲಕ್ಷಣ, ಗಣೇಶ, ಕುಮಾರ್ ಹಾಗೂ ಸ್ವಾತಿ ಇವರುಗಳು ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಊರಿಗೆ ಹಾಗೂ ಬಂಜಾರ ಸಮಾಜಕ್ಕೆ ಕೀರ್ತಿ ತಂದಿದ್ದಾರೆ.
ಕುಮಾರಿ ಆಶಾಮ್ಮ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತಾಂಡಾದ ಹೆಸರನ್ನು ತಂದಿದ್ದಾರೆ.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ, ರಾಮಾ ನಾಯ್ಕ್ ಮಾತನಾಡಿ, “ದುರ್ಗಾ ಮಾತ ಸಂಘದವರು ಒಂದು ಉತ್ತಮ ಕಾರ್ಯ ನಡೆಯುತ್ತಿದ್ದು, ನಮ್ಮ ಮಕ್ಕಳ ನೃತ್ಯ ನೋಡುವುದಕ್ಕೆ ಕಲ್ಪಿಸಿ ಕೊಟ್ಟಂತಹ ಯುವಕರಿಗೆ ನನ್ನ ಧನ್ಯವಾದಗಳು, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿನಮ್ಮ ಮಕ್ಕಳು ಜಿಲ್ಲಾ ಮಟ್ಟ ಅಲ್ಲ, ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾರೆ” ಎಂದರು.
ನಾಗುಭಾಯಿ ಕೃಷ್ಣಪ್ಪ ರಾಠೋಡ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕೇಂದ್ರದ ನೀರಕ್ಷಕರು ಮಾತನಾಡಿ, ” ಶಿಕ್ಷಣ ಹಾಗೂ ಕ್ರೀಡೆ ಸಂಸ್ಕೃತಿಕ ಚಟುವಟಿಕೆಯಲ್ಲಿ ಬಹಳಷ್ಟು ಸಹಕಾರ ಇದ್ದು, ಆದ್ರೆ ಈ ಊರಲ್ಲಿ ಬಾಲ್ಯ ವಿವಾಹ ನಡೆಯಿತ್ತು, ಇದನ್ನು ತಡೆಯಬೇಕಾಗುತ್ತೆ. ಒಂದು ವೇಳೆ ಬಾಲ್ಯ ವಿವಾಹ ನಡೆದರೇ, ಅದು ಮುಗ್ದ ಹೆಣ್ಣುಮಕ್ಕಳ ಭವಿಷ್ಯ ಹಾಳಾಗುತ್ತೆ, ಬಾಲ್ಯ ವಿವಾಹ ಮಹಾ ಅಪರಾಧ, ಅಂತಹ ವ್ಯಕ್ತಿಗಳ ವಿರುದ್ದ ಗರಿಷ್ಠ 2 ವರ್ಷಗಳ ಸಜೆ ಮತ್ತು 1,00,000 ರೂ.ವರೆಗಿನ ದಂಡಕ್ಕೆ ಹೊಣೆಗಾರರಾಗಿರುತ್ತಾರೆ. ಸರ್ಕಾರದಿಂದ ನೀಡಿರುವಂತಹ ಶೌಚಾಲಯಗಳನ್ನು ತಪ್ಪದೇ ಹೆಣ್ಣು ಮಕ್ಕಳು ಬೆಳೆಸಬೇಕು. ಅದು ನಮ್ಮ ಮರ್ಯಾದೆ ಮಾನದ ಪ್ರಶ್ನೆ ಆಗಿರುತ್ತದೆ” ಶಿಕ್ಷಣದ ಜೊತೆಗೆ ಮಕ್ಕಳಿಗೆ ಸ್ವಚ್ಛತೆಯ ಶಿಕ್ಷಣವನ್ನ ಮಾಡಬೇಕಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ವಿಷ್ಣು ನಾಯ್ಕ್, ಅತಿಥಿ ಉಪನ್ಯಾಸಕ ನಿರೂಪಣೆ ಹಾಗೂ ಮಂಜುನಾಥ್ ನಾಯ್ಕ್ ಸ್ವಾಗತಿಸಿದರುಹಾಗೂ ಗ್ರಾಮದ ಗಣ್ಯ ವ್ಯಕ್ತಿಗಳು, ಹಿರಿಯರು ಹಾಗೂ ಯುವಕ & ಮಹಿಳೆಯರು ಇದ್ದರು.