ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವಾಗ ಹಣ ಪಡೆದ ಗ್ರಾಮ ಒನ್ ಸಿಬ್ಬಂದಿ ಲಾಗಿನ್ ಐಡಿ ರದ್ದು ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಬಾಗಲಕೋಟೆಯ ಶೂರ್ಪಾಲಿಯ ಗ್ರಾಮ ಒನ್ ಗ್ರಾಮದಲ್ಲಿ ನಡೆದಿದೆ .
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಹಣ ಕೇಳಿದ್ದಕ್ಕೆ ಸಿದ್ದಪ್ಪ ಎಂಬುವವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಇದರ ವಿಡಿಯೋ ಭಾರೀ ವೈರಲ್ ಆಗಿತ್ತು, ಈ ಕುರಿತು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ನಡುವೆ ಸಾರ್ವಜನಿಕರ ದೂರಿನ ಮೇರೆಗೆ ಬಾಗಲಕೋಟೆ ಜಿಲ್ಲಾಡಳಿತವು, ಗ್ರಾಮ ಒನ್ ಸಿಬ್ಬಂದಿ ದಾನಯ್ಯ ಮಠಪತಿ ಎಂಬುವರ ಲಾಗಿನ್ ಐಡಿ ರದ್ದು ಮಾಡಲಾಗಿದೆ ಎಂದು ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
‘ಗೃಹಲಕ್ಷ್ಮಿ ಯೋಜನೆ’ಗೆ ಕಳೆದ ಗುರುವಾದಿಂದ ನೋಂದಣಿ ಆರಂಭವಾಗಿದ್ದು, ನಿನ್ನೆ ಒಂದೇ ದಿನ ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ನಡುವೆ ಹಲವೆಡೆ ಸರ್ವರ್ ಸಮಸ್ಯೆ ಉಂಟಾಗಿ ಸಾಕಷ್ಟು ಜನ ಪರಡಾಟ ನಡೆಸಿದ್ದು ಕೂಡ ಕಂಡು ಬಂದಿದೆ. ನಿನ್ನೆ (ಶನಿವಾರ) ಒಂದೇ ದಿನ 14,16,462 ಜನರ ಅರ್ಜಿ ಸಲ್ಲಿಸಿದ್ದು, ಇಲ್ಲಿ ತನ ಒಟ್ಟು 22,90,782 ಮಹಿಳೆಯರ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
*‘ಗೃಹಲಕ್ಷ್ಮಿ ಯೋಜನೆ’ಯ ನೋಂದಣಿಗೆ ಇಲ್ಲಿದೆಚ ಸುಲಭ ವಿಧಾನ*
➤ ಈ ಯೋಜನೆಯ ಫಲಾನುಭವಿಗಳು ಗ್ರಾಮಒನ್, ನಗರ ಪ್ರದೇಶದಲ್ಲಿ ತೆರೆಯಲಾದ ಕರ್ನಾಟಕ ಒನ್ ಕೇಂದ್ರಗಳು ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‍ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
➤ ಫಲಾನುಭವಿಗಳು ಕೇಂದ್ರಗಳಲ್ಲದೆ ಪ್ರಜಾಪ್ರತಿನಿಧಿ ಮೂಲಕ ಸಹ ಸೇವಾ ಸಿಂಧು ಪೋರ್ಟಲ್‍ನಲ್ಲಿ ಉಚಿತವಾಗಿಯೇ ನೋಂದಾಯಿಸಿಕೊಳ್ಳಬಹುದು.
➤ ಪ್ರತಿ ದಿನ ಅರ್ಹ ಫಲಾನುಭವಿಗಳಿಗೆ (ಬೆಳಗ್ಗೆ 30 ಮತ್ತು ಮಧ್ಯಾಹ್ನ 30 ಮಂದಿಗೆ ಮಾತ್ರ) ವೇಳೆಯಲ್ಲಿ ಹಾಗೂ ನೋಂದಣಿ ಕೇಂದ್ರದ ವಿವರಗಳು ಮೊಬೈಲ್ ಸಂದೇಶದ ಮೂಲಕ ಸ್ವೀಕೃತವಾಗಲಿದ್ದು, ಈ ಸಂದೇಶ ಸ್ವೀಕೃತಗೊಂಡ ಫಲಾನುಭವಿಗಳು ಮಾತ್ರ ಸಂದೇಶದಲ್ಲಿ ವಿವರಿಸಿದ ಸೇವಾ ಕೇಂದ್ರಕ್ಕೆ ನಿಗಧಿಪಡಿಸಿದ ವೇಳೆಗೆ ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿದೆ.
➤ ಪ್ರತಿ ಅರ್ಹ ಫಲಾನುಭವಿಯ ನೋಂದಾವಣಿಗೆ ನಿಗಧಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 8147500500 ನಂಬರ್‌ಗೆ ಎಸ್‍ಎಂಎಸ್ ಮೂಲಕ ಸಂದೇಶ ಕಳುಹಿಸಿ ಅಥವಾ 1902 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಿರಿ.
➤ ನಿಗಧಿ ಪಡೆಸಿದ ವೇಳೆಗೆ ಭೇಟಿ ನೀಡಿ ನೋಂದಾವಣೆ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಕಚೇರಿ ಸಮಯದ ನಂತರ (ಸಂಜೆ 5 ಗಂಟೆ ಬಳಿಕ) ತೆರಳಿ ನೋಂದಾಯಿಸಿ.
➤ ಅನುಮೋದಿಸಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ನೀಡಲಾಗುವುದು. ಈ ಯೋಜನೆಯಡಿಯಲ್ಲಿ ನೋಂದಾಯಿಸುವ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.
➤ ಯೋಜನೆಯಡಿ ನೋಂದಾಯಿಸಿಕೊಳ್ಳಲು ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗಧಿ ಪಡಿಸಿರುವುದಿಲ್ಲ.
ವರದಿ : ಚಂದ್ರು ಆರ್ ಭಾನಾಪೂರ್