ಕನಕಗಿರಿ : ಜ್ಞಾನದ ಕೃಷಿ ಮಾಡಿದ ನಿಸ್ವಾರ್ಥಿ ಗುರುವಿಗೆ ಇಡೀ ಊರಿಗೂರೆ ಗುರುವಂದನೆ ಮಾಡಿದ ಪ್ರಸಂಗ ತಾಲೂಕಿನ ನವಲಿತಾಂಡದಲ್ಲಿ ನಡೆಯಿತು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲಿ ತಾಂಡದ ಸಹ ಶಿಕ್ಷಕನಾಗಿ ಹಾಗೂ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿದ ಶಿಕ್ಷಕ ಮಲ್ಲಿನಾಥ್ ಮನಗೂರ ಅವರಿಗೆ ನಿನ್ನೆ (ನವೆಂಬರ್ 03 ರಂದು) ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವರ್ಗಾವಣೆ ಗೊಂಡ ಗುರುಗಳಿಗೆ “ಗುರು ವಂದನಾ ಕಾರ್ಯಕ್ರಮ”ವನ್ನು ಹಳೆಯ ವಿದ್ಯಾರ್ಥಿಗಳು ಹಾಗೂ ಊರಿನ ಹಿರಿಯರು ಹಮ್ಮಿಕೊಂಡಿದ್ದುರು. ಬರೋಬ್ಬರಿ 16 ಸೇವೆ ಒಂದೇ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕ ಮಲ್ಲಿನಾಥ್ ಶಾಲೆಗೆ ಹಾಗೂ ನವಲಿತಾಂಡಕ್ಕೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ಇವರಿಗೆ “ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ” 2018ರಲ್ಲಿ ಪುರಸ್ಕಾರ ಸಿಕ್ಕಿದೆ.
ಇವರ ಸೇವಾವಧಿಯಲ್ಲಿ ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿ ವಾತಾ ವರಣ ಹೊಂದಿರುವ ಶಾಲೆಗಳಿಗೆ ಕರ್ನಾ ಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನೀಡುವ ಜಿಲ್ಲಾ ಮಟ್ಟದ “ಜಿಲ್ಲಾ ಮಟ್ಟದ ಹಳದಿ ಶಾಲೆ ಹಾಗೂ ಹಸಿರು ಶಾಲೆ” ಪ್ರಶಸ್ತಿ ಕೂಡಾ ಲಭಿಸಿದೆ. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಈ ಶಾಲೆ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸರ್ಧೆ ಮಾಡಿ ಬಹಳಷ್ಟು ಪ್ರಶಸ್ತಿ ಬಾಚಿಕೊಂಡಿದೆ ಮತ್ತು ಶಾಲಾ ಆವಾರಣದಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತ ತರಗತಿ ಕೊಟ್ಟಡಿಗಳು ಹಾಗೂ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ.
ಈ ಕಾರ್ಯಕ್ರಮದ ಮೊದಲು ತಾಂಡದ ಆರಾಧ್ಯ ದೈವಗಳಾದ ಸಂತ ಶ್ರೀ ಸೇವಾಲಾಲ್ ಹಾಗೂ ಶ್ರೀ ದುರ್ಗಾದೇವಿ ದೇವಾಸ್ಥಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಕುಂಭ ಹೊತ್ತ ಹೆಣ್ಣುಮಕ್ಕಳು ಶಿಕ್ಷಕ ಮಲ್ಲಿನಾಥ್ ಮನಗೂರ ಅವರಿಗೆ ಅದ್ದೂರಿ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆ ತಂದರು.
ಇದೆ ವೇಳೆ ಇವರ ಜೊತೆಗೆ ಈ ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆಗೊಂಡ ಕೆಲ ಶಿಕ್ಷಕರಿಗೂ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮುಖೇಶ್, ಶಿಕ್ಷಕರರಾದ ನಾಗಪ್ಪ, ಮಾಂತೇಶ, ವಿರುಪಣ್ಣ, ನಾಗರತ್ಮ, ನೀಲಪ್ಪ ನಾಯ್ಕ್, ಮೋತಿಲಾಲ್ ನಾಯ್ಕ್, ರಾಮನಾಯ್ಕ. ಸಿಬ್ಬಂದಿ ವರ್ಗ. ಉಪನ್ಯಾಸಕ ವಿಷ್ಣು ನಾಯ್ಕ್ ಹಾಗೂ ಊರಿನ ಹಿರಿಯ, ಯುವಕರು, ಮುದ್ದು ಮಕ್ಕಳು ಭಾಗವಹಿಸಿದ್ದರು.