ಕುಕನೂರು ಪಟ್ಟಣದಲ್ಲಿ ಮಂಗಳವಾರ ಜೈನ ಗುರುಗಳಾದ ಮಹಾವೀರರ ಜಯಂತಿಯನ್ನು ತಹಶೀಲ್ದಾರ್ ಕಾರ್ಯಾಲಯದಲ್ಲಿ ಉಪತಹಶೀಲ್ದಾರ್ ಮುರಳಿಧರ್ ರಾವ್ ಕುಲಕರ್ಣಿ ನೇತೃತ್ವದಲ್ಲಿ ಮಹಾವೀರರ ಪೋಟೋಗೆ ಪೂಜೆ ಸಲ್ಲಿಸುವ ಮೂಲಕ ಸಮುದಾಯದ ಮುಖಂಡರ ಜೊತೆಗೂಡಿ ಜಯಂತಿಯನ್ನು ಆಚರಿಸಲಾಯಿತು.
ಜೈನ ಸಮುದಾಯದರಿಂದ ಪಟ್ಟಣದಲ್ಲಿರುವ ಜೈನ ಭವನದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೈನ ಧರ್ಮದ ಜಯಘೋಷಣೆಗಳೊಂದಿಗೆ ಮಾಹಾವೀರ ಭಾವಚಿತ್ರ ಮೆರವಣಿಗೆಯನ್ನು ನೆಡೆಸಲಾಯಿತು. ಬಳಿಕ ಮಹಾವೀರ ಸಭಾ ಭವನದಲ್ಲಿ ಸಮುದಾಯದ ಮಹಿಳೆಯರು ಹಾಗೂ ಮಕ್ಕಳು ಸೇರಿ ಮಹಾವೀರರ ಜೀವನ ಕ್ರಮ ಹಾಗೂ ಅವರ ತತ್ವ ಆದರ್ಶಗಳು ಹಾಗೂ ಭೋದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಜೈನ್ ಸಮುದಾಯದ ದಿಗಂಬರರು, ಶ್ವೇತಂಬರರು ಜೈನ್ ಸಮಾಜದ ಎಲ್ಲಾ ಯುವಕರು ಹಾಗೂ ಹಿರಿಯರು ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.