BREAKING NEWS : ಭೀಕರ ಅಪಘಾತ : ಸ್ಥಳದಲ್ಲೇ ಓರ್ವ ಸಾವು..!

ಕೊಪ್ಪಳ : ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಬೆಳಗಿನ ಜಾವ ಆರು ಮೂವತ್ತರ ಸುಮಾರಿಗೆ ಬೈಕ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಚಾಲಕ 50 ವರ್ಷದ ಶಿವಪ್ಪ ಬಿನ್ನಾಳ ಎಂಬವರು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಸ್ಥಳಕ್ಕೆ ಕುಕನೂರ್ ಪೊಲೀಸ್ ಠಾಣೆ ಪಿಎಸ್ಐ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಕನೂರಿನ ಆಸ್ಪತ್ರೆಗೆ ರವಾನಿಸಿರುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Leave a Reply

error: Content is protected !!