ಕುಕನೂರು:ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಸಂಸ್ಥಾಪನಾ ದಿನವನ್ನು ಬುಧವಾರ ಆಚರಿಸಲಾಯಿತು.
ಪಕ್ಷದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ದೀನದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪಕ್ಷದ ಹಿರಿಯರಾದ ಅರ್ಜುನರಾವ ಜಗತಾಪ ಹಾಗೂ ರಾಘವೇಂದ್ರ ರಾವ್ ದೇಸಾಯಿ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಿಗೆ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಬಳಿಕ ಹಿರಿಯರಾದ ರಾಘವೇಂದ್ರ ದೇಸಾಯಿ ಮಾತನಾಡಿ ದೇಶ ಭಕ್ತಿಯ ಬಗ್ಗೆ ಹಾಗೂ ದೇಶ ರಕ್ಷಣೆ ಮಾಡುವ ವ್ಯಕ್ತಿಗಳ ನೆನೆಯುವ ದಿನವಿದು ಎಂದರು. ಜನಸಂಘ ಸ್ಥಾಪನೆ ಹಾಗೂ ಅದು ನೆಡೆದು ಬಂದ ಹಾದಿಯನ್ನು ಮೆಲಕು ಹಾಕಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಿಜೆಪಿ ನಗರ ಘಟಕ ಅಧ್ಯಕ್ಷ ಬಸವರಾಜ ಹಾಲಕೇರಿ,ಶರಣಪ್ಪ ಬಣ್ಣದಬಾವಿ,ಸಿದ್ದಲಿಂಗಯ್ಯ ಉಳ್ಳಾಗಡ್ಡಿ,ಕರಬಸಯ್ಯ ಬಿನ್ನಾಳ, ಮಂಜುನಾಥ ನಾಡಗೌಡರ,ಮಲ್ಲಿಕಾರ್ಜುನ ಚೌಧರಿ, ಮಹಾಂತೇಶ ಹೂಗಾರ,ಬಾಲರಾಜ ಗಾಳಿ, ಬಸವರಾಜ ಮೇಟಿ,ಸಾದಿಕ್ ಪಾಷಾ ಖಾಜಿ, ಗಂಗಾಧರ ನಾರಾಯಣ,ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬಿಜೆಪಿಯ ಸಂಸ್ಥಾಪನಾ ದಿನಾಚರಣೆ
