BREAKING : ಯಾವುದೇ ಕಾರಣಕ್ಕೂ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ : ನಟ ಕಿಚ್ಚ ಸುದೀಪ್ ಸ್ಪಷ್ಟನೆ!!

You are currently viewing BREAKING : ಯಾವುದೇ ಕಾರಣಕ್ಕೂ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ : ನಟ ಕಿಚ್ಚ ಸುದೀಪ್ ಸ್ಪಷ್ಟನೆ!!

ಬೆಂಗಳೂರು : ‘ಯಾವುದೇ ಕಾರಣಕ್ಕೂ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ನಟ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿ ಮಾತನಾಡಿದ ನಟ ಕಿಚ್ಚ ಸುದೀಪ್, ‘ನಾನು ನನ್ನ ಚಿತ್ರರಂಗದ ದಿನಗಳಿಂದ ಕಷ್ಟ, ಸುಖವನ್ನು ಕಂಡು ಬೆಳೆದವನು. ಆ ಸಂದರ್ಭದಲ್ಲಿಯೂ ನನ್ನ ಬೆಂಬಲಕ್ಕೆ ನಿಂತವರು ಬಸವರಾಜ ಬೊಮ್ಮಾಯಿ ಅವರು. ಆ ಕ್ಷಣದಿಂದಲೂ ಬಸವರಾಜ ಬೊಮ್ಮಾಯಿ ಅವರನ್ನು ಮಾಮ ಎಂದೇ ಕರೆದುಕೊಂಡು ಬಂದಿದ್ದೇನೆ. ಅಂತಹ ಅವರ ಪರವಾಗಿ ನನ್ನ ಬೆಂಬಲವಿದೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ, ನಿಲ್ಲೋ ಮಾತೇ ಇಲ್ಲ. ನನ್ನದು ಕೇವಲ ಸಿಎಂ ಬಸವರಾಜ ಬೊಮ್ಮಾಯಿ ಮಾಮನಿಗೆ ಬೆಂಬಲ ನೀಡುತ್ತೇನೆ ಎಂದರು.

ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾತಾಡಿ, ‘ನಟ ಸುದೀಪ್ ಯಾವುದೇ ಪಕ್ಷಕ್ಕೆ ಸೇರಲ್ಲ, ಆದ್ರೆ ನನಗೆ ಬೆಂಬಲ ಕೊಡುತ್ತಿದ್ದಾರೆ. ಪಕ್ಷಕ್ಕೆ ಸೇರದೇ ಇದ್ದರೂ ನಿನ್ನ ಅನಿವಾರ್ಯತೆ ಇದೆ ಎಂದು ಹೇಳಿದ್ದೇನೆ, ಹಾಗಾಗಿ ನಟ ಸುದೀಪ್ ನನಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Leave a Reply

error: Content is protected !!