LOCAL EXPRESS : ‘ಮೋಜು ಮಸ್ತಿಗೆ ರಾಜಕಾರಣಕ್ಕೆ ನಾನು ಬಂದಿಲ್ಲ, ಇವತ್ತೇ ರಾಜೀನಾಮೆ ಕೊಡುವುದಕ್ಕೂ ಸಿದ್ದ..!!’ : ಶಾಸಕ ಬಸವರಾಜ್ ರಾಯರೆಡ್ಡಿ

You are currently viewing LOCAL EXPRESS : ‘ಮೋಜು ಮಸ್ತಿಗೆ ರಾಜಕಾರಣಕ್ಕೆ ನಾನು ಬಂದಿಲ್ಲ, ಇವತ್ತೇ ರಾಜೀನಾಮೆ ಕೊಡುವುದಕ್ಕೂ ಸಿದ್ದ..!!’ : ಶಾಸಕ ಬಸವರಾಜ್ ರಾಯರೆಡ್ಡಿ

ಪ್ರಜಾ ವೀಕ್ಷಣೆ ಸುದ್ದಿಜಾಲ :-

LOCAL EXPRESS : ಮೋಜು ಮಸ್ತಿ ರಾಜಕಾರಣಕ್ಕೆ ನಾನು ಬಂದಿಲ್ಲ, ಇವತ್ತೇ ರಾಜೀನಾಮೆ ಕೊಡುವುದಕ್ಕೂ ಸಿದ್ದ ..!! : ಶಾಸಕ ಬಸವರಾಜ್ ರಾಯರೆಡ್ಡಿ

ಕುಕನೂರು : ‘ನನ್ನ ಕ್ಷೇತ್ರದ ಅಭಿವೃದ್ದಿಯ ನನ್ನ ಮೂಲ ಮಂತ್ರ, ನನಗೆ ಶೋಕಿ ಮಾಡಿವ ಗೀಳಿಲ್ಲ, ನಾನು ರಾಜಕಾರಣಕ್ಕೆ ಬಂದಿರುವುದು ಮೋಜು ಮಸ್ತಿಗೆ ಅಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಇಂದು ತಾಲೂಕಿನ ಕುದರಿಮೋತಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಈ ಬಾರಿಯ ಆರ್ಥಿಕ ವರ್ಷದಲ್ಲಿ ಅವಳಿ ತಾಲೂಕಿನಲ್ಲಿ 970 ಕೋಟಿ ವೇಚ್ಚದಲ್ಲಿ ಸುಮಾರು 40 ಕೆರೆ ತುಂಬಿಸುವ ಯೋಜನೆ ತಂದ್ದಿದ್ದೇನೆ. ಇದೇ ಸೆ.17 ರಂದು ಕ್ಯಾಬಿನೇಟ್‌ನಲ್ಲಿ ಅನೂಮೊದನೆ ದೊರೆಯಲಿದೆ ಜೊತೆಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಇದನ್ನು ಒರತುಪಡಿಸಿವೂ ಕೂಡಾ ಶಿಕ್ಷಣ ಕ್ಷೇತ್ರಕ್ಕೆ, ಕೃಷಿಗೆ , ಸಮಾಜಿಕವಾಗಿ ಹೀಗೆ ಎಲ್ಲಾ ಕ್ಷೆತ್ರಗಳಿಗೆ ತಕ್ಕ ಮಟ್ಟಿಗೆ ಒಳ್ಳಯ ಕಾರ್ಯಗಳು ನಡೆಯುತ್ತಿದೆ. ನನ್ನ ತಾಲೂಕಿನಲ್ಲಿ ಯಾವುದೇ ಅಭಿವೃದ್ದಿ ಕೆಲಸ ನಡೆದಿಲ್ಲ ಎಂದಾದರೇ, ಇವತ್ತೇ ರಾಜೀನಾಮೆ ಕೊಡುವುದಕ್ಕೂ ಸಿದ್ದನಿದ್ದೇನೆ‘ ನಾನೂ ಸುಮನ್ನೆ ಕೂರುವು ಮನುಷ್ಯನಲ್ಲ, ನನಗೆ ಕೆಲಸಬೇಕು ದಿನದ 24 ಗಂಟೆಗಳಲ್ಲಿ ಸುಮಾರು 16 ತಾಸು ಕೆಲಸ ಮಾಡಬೇಕು ಎಂದು ಹೇಳಿದರು.

‘ಈ ಯೋಜನೆಗೆ ರೈತರು ಭೂಮಿ ಕೊಟ್ಟು ಸಹಕರಿಸಬೇಕು. ಇಲ್ಲಾಂದ್ರೆ ಈ ಹಣ ವಾಪಾಸ್‌ ಹೋಗಲಿದೆ. ಹಾಗಾಗಿ ಗ್ರಾಮಸ್ಥರು, ರೈತ ವರ್ಗದವರು ಈ ಯೋಜನೆಯ ಬಗ್ಗೆ ಗಮನ ಹರಿಸಿ ಭೂಮಿ ಕೊಡಿಸಬೇಕು. ನಿಮ್ಮ ಭೂಮಿಗೆ ತಕ್ಕ ಬೆಲೆ ನಿಗಧಿ ಮಾಡಿ ಸರ್ಕಾರದಿಂದ ಹಣ ಕೊಡಿಸುವ ಕೆಲಸ ಮಾಡುತ್ತೇನೆ. ಖಾಸಗಿ ಕಂಪನಿಗಳಿಗೆ ನಿಮ್ಮ ಭೂಮಿ ಕೊಡುವುದಕ್ಕಿಂತ ಮೊದಲ ಆದ್ಯತೆ ಸರ್ಕಾರಿ ಹಾಗೂ ಅಭಿವೃದ್ದಿ ಕೆಲಸಗಳಿಗೆ ನೀಡಿ, ಈ ಮೂಲಕ ಕ್ಷೇತ್ರ ಅಭಿವೃದ್ದಿಗೆ ಸಹಕರಿಸಿ’ ಎಂದು ಹೇಳಿದರು.

Leave a Reply

error: Content is protected !!