ಶಿವನಾಮ ಮಾಡುವವರಿಗೆ ಯಮನ ಭಯವಿಲ್ಲ : ಆತ್ಮಾನಂದ ಭಾರತಿ ಶ್ರೀ
ಕುಕನೂರು: ನಿತ್ಯ ಶಿವ ನಾಮ ಮಾಡುವವರಿಗೆ ಯಮನ ಭಯವಿಲ್ಲ ಎಂದು ಪಟ್ಟಣದ ರಾಘವಾನಂದ ಮಠದ ಆತ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಕೋಳಿ ಪೇಟೆಯ ರಾಘವ ನಂದು ಆಶ್ರಮದ ವತಿಯಿಂದ ರಾಘವಾನಂದರ 48ನೇ ಹಾಗೂ ರಮಾನಂದ ಸ್ವಾಮಿಗಳ 12ನೇ ವರ್ಷದ ಪುಣ್ಯರಾಧನೆಯ ಪ್ರಯುಕ್ತ ಎರಡು ದಿನಗಳ ಕಾಲ ನಡೆದ ವೇದಾಂತ ಉಪನ್ಯಾಸ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಸೇವೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮನುಷ್ಯ ಜೀವನವು ದೇವರು ನೀಡಿದ ಒಂದು ಅತ್ಯದ್ಭುತ ವರವಾಗಿದೆ. ಜಗತ್ತಿನ ಕೋಟ್ಯಂತರ ಜೀವರಾಶಿಗಳಲ್ಲಿ ಮನುಷ್ಯ ಒಂದು ಅಮೂಲ್ಯ ಜೀವಿಯಾಗಿದೆ. ಮನುಷ್ಯ ಜೀವನ ಸಾರ್ಥಕತೆ ಕಾಣಬೇಕಾದರೆ ಶಿವನಾಮ ಮಾಡಬೇಕು.
ಹೀಗೆ ನಿತ್ಯ ಶಿವನಾಮ ಮಾಡುವವರಿಗೆ ಯಮನ ಭಯ ಇರುವುದಿಲ್ಲ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಂಪಿಯ ಹೇಮಕೂಟದ ವಿದ್ಯಾನಂದ ಭಾರತಿ ಮಹಾ ಸ್ವಾಮೀಜಿ ವಹಿಸಿಕೊಂಡಿದ್ದರು.
ಚಿಕೆನಕೊಪ್ಪದ ಅನ್ನದಾನ ಭಾರತೀಯ ಸ್ವಾಮೀಜಿ, ಕೊಪ್ಪಳದ ಚೈತನ್ಯಾನಂದ ಸ್ವಾಮಿ, ಬಸಾಪುರದ ಪ್ರಣವಾನಂದ ಸ್ವಾಮಿಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂದರ್ಭದಲ್ಲಿ ಕುಕನೂರು ಪಟ್ಟಣದ ಕೋಳಿಪೇಟೆಯ ಹಿರಿಯರು ಹಾಗೂ ಸುತ್ತಮುತ್ತ ಗ್ರಾಮದ ನೂರಾರು ಭಕ್ತರು ಇದ್ದರು.