LOCAL NEWS : ದೇವಸ್ಥಾನ ಜೀರ್ಣೋದ್ದಾರಕ್ಕೆ ಅರವಿಂದ್ ಗೌಡ ಪಾಟೀಲ್ ದಣಿಗೆ.
ಅರವಿಂದ್ ಗೌಡ ಪಾಟೀಲ್ ಅವರಿಂದ ಮುಂದುವರೆದ ಜನಸಂಪರ್ಕ ಕಾರ್ಯಕ್ರಮ.
ಸರ್ವ ಸಮುದಾಯದ ಪ್ರಗತಿಗೆ ಶ್ರಮಿಸುವೆ : ಅರವಿಂದ್ ಗೌಡ ಪಾಟೀಲ್.
ಕುಕನೂರು : ಮಾಜಿ ಶಾಸಕ ಶಿವಶರಣಪ್ಪ ಗೌಡ ಪಾಟೀಲ್ ಅವರ ಪುತ್ರ ಕೊಪ್ಪಳ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅರವಿಂದ್ ಗೌಡ ಪಾಟೀಲ್ ಇಂದು ಕುಕನೂರು ತಾಲೂಕಿನ ಬಳಗೇರಿ ಗ್ರಾಮಕ್ಕೆ ಭೇಟಿ ಕೊಡುವುದರ ಮೂಲಕ ತಮ್ಮ ಜನ ಸಂಪರ್ಕ ಕಾರ್ಯಕ್ರಮ ಇಂದೂ ಕೂಡಾ ಮುಂದುವರೆಸಿದರು.
ಈ ಸಂದರ್ಭದಲ್ಲಿ ಅರವಿಂದ್ ಗೌಡ ಪಾಟೀಲ್ ಅವರು ಮಾತನಾಡಿ, ತಮ್ಮ ತಂದೆ ಮಾಜಿ ಶಾಸಕರಾಗಿದ್ದ ಶಿವಶರಣಪ್ಪ ಗೌಡ ಪಾಟೀಲ್ ಅವರ ಆಡಳಿತದ ಕಾಲದಿಂದಲೂ ತಾಲೂಕಿನ ಎಲ್ಲ ಸಮುದಾಯ, ಸಮಾಜದ ಪ್ರೀತಿ ವಿಶ್ವಾಸ, ಬೆಂಬಲ ನಮ್ಮ ಕುಟುಂಬದ ಮೇಲಿದೆ. ತಾಲೂಕಿನ ಎಲ್ಲ ಸಮಾಜದವರು ನಮ್ಮ ಕುಟುಂಬದ ಸದಸ್ಯರಿದ್ದಂತೆ.
ತಮ್ಮ ತಂದೆ ಮಾಜಿ ಶಾಸಕ ಶಿವಶರಣಪ್ಪ ಗೌಡ ಪಾಟೀಲ್ ರು ತಮ್ಮ ಅವಧಿಯಲ್ಲಿ ಮಾಡಿದ 20 ವರ್ಷಗಳ ಹಿಂದಿನ ಕೆಲಸಗಳು ಈಗಲೂ ಜನರ ನೆನಪಿನಲ್ಲಿ ಉಳಿಯುವಂತಿವೆ. ಅವರು ಶಾಸಕರಾಗಿದ್ದ ಸಮಯದಲ್ಲಿ ತಾಲೂಕಿನ ಎಲ್ಲಾ ಭಾಗದಲ್ಲಿಯು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.ಜನರು ಈಗಲೂ ಅವರ ಮೇಲೆ ಪ್ರೀತಿ ಅಭಿಮಾನ ಹೊಂದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ಗೌಡ ಪಾಟೀಲ್ ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮತ್ತು ಪ್ರಭಾವಿ ಮುಖಂಡರಾಗಿರುವ ಅರವಿಂದ್ ಗೌಡ ಅಪಾರ ಬೆಂಬಲಿಗರೊಂದಿಗೆ ಇಂದು ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಶ್ರೀ ಬಳ್ಳೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಮಾಡಿಸಿದರು. ನಂತರ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಜೀರ್ಣೋದ್ದಾರ ಕಾರ್ಯಕ್ಕೆ ದೇಣಿಗೆ ನೀಡಿದರು. ಮತ್ತು ಗ್ರಾಮದ ಮೂವರು ಬುದ್ದಿಮಾಂದ್ಯ ಮಕ್ಕಳನ್ನು ಭೇಟಿಯಾಗಿ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡಿದರು.
ನಂತರ ಮಾತನಾಡಿದ ಅವರು, ಜನರ ಕಷ್ಟಗಳಿಗೆ ಸ್ಪಂದಿಸಿ ಕೈಲಾದಷ್ಟು ಸೇವೆ, ಸಹಾಯ ಮಾಡಲು ಜನರೊಂದಿಗೆ ಬೆರೆಯುತ್ತಿದ್ದೇವೆ. ಎಲ್ಲ ಸಮುದಾಯದವರಿಂದ ನಮ್ಮ ಕುಟುಂಬದ ಮೇಲಿನ ಪ್ರೀತಿ,ಅಪಾರ ಬೆಂಬಲ ಈಗಲೂ ಇದೆ. ಮುಂದೆಯೂ ಇರುತ್ತದೆ ಎಂದು ಅರವಿಂದ್ ಗೌಡ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಭಕ್ತ ಕನಕದಾಸರ ಮೂರ್ತಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರ ವೃತ್ತಕ್ಕೆ ಹೂ ಮಾಲೆ ಅರ್ಪಿಸಿ ಗೌರವ ಸೂಚಿಸಿದರು.
ಈ Kಗಾರ್, ಲಕ್ಷ್ಮಣ್ ಕಮ್ಮಾರ್, ಶಿವಪ್ಪ ಬಡಿಗೇರ್, ದೊಡ್ಡಪ್ಪ ಕೋಮಾರ್, ಈರಪ್ಪ ಕುರಿ, ಬಸನಗೌಡ ಮಾಲಿ ಪಾಟೀಲ್, ಮುದಿಯಪ್ಪ ಕಮತರ್, ವಿರೂಪಾಕ್ಷ ಯ್ಯ ವೀರಕ್ತಮಠ, ಪಕೀರಪ್ಪ ತಳವಾರ್ ಅನೇಕರು ಉಪಸ್ಥಿತರಿದ್ದರು.