ಶಿರಹಟ್ಟಿ:ಪಟ್ಟಣದ ಸ್ಥಳೀಯ ಕುಂದು ಕೊರತೆ ನಿವಾರಣ ಸಮಿತಿ ವತಿಯಿಂದ ತಾಲೂಕ ದಂಡಾಧಿಕಾರಿಗಳ ಮುಖಾಂತರ ಶಿರಹಟ್ಟಿ ಪಟ್ಟಣದ ಸುತ್ತಮುತ್ತಲಿನ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳಾದ ಗದಗ್ ರಸ್ತೆ ಮುಂಡರಗಿ ರಸ್ತೆ ವರವಿ ರಸ್ತೆ ಹಾಗೂ ರಾಣಿಬೆನ್ನೂರು ರಸ್ತೆ ರಾಜ್ಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಆರ್ ಸಿ ಸಿ ಕಂಪನಿಯ ಬಾರಿ ವಾಹನ ಓಡಾಟದಿಂದ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಪಟ್ಟಣದ ಸಂಪೂರ್ಣ ರಸ್ತೆಗಳು ಹಾಳಾಗಿದ್ದು ಈ ರಸ್ತೆಯನ್ನು ಮರು ನಿರ್ಮಾಣಕ್ಕೆ ಹಲವು ಬಾರಿ ಆರ್ ಸಿ ಸಿ ಕಂಪನಿಗೆ ಮನವಿ ಸಲ್ಲಿಸಿದರು ಯಾವುದೇ ರೀತಿ ಪ್ರಯೋಜನವಾಗಿಲ್ಲ ರಸ್ತೆಗಳು ಕೆಟ್ಟು ಹಾಳಾಗಿದ್ದು ಇದುವರೆಗೆ ರಸ್ತೆ ಕಾಮಗಾರಿಗೆ ಗುತ್ತಿಗೆ ಪಡೆದ ಆರ್ ಸಿ ಸಿ ಕಂಪನಿಯವರು ರಸ್ತೆ ದುರಸ್ತಿಗೊಳಿಸಿಲ್ಲ ಎಂದು ಸ್ಥಳೀಯ ಕುಂದು ಕೊರತೆ ನಿವಾರಣ ಸಮಿತಿ ಅಧ್ಯಕ್ಷರು ಸದಸ್ಯರು ರಸ್ತೆ ದುರಸ್ತಿ ಮಾಡಲು ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಅಕ್ಬರ್ ಸಾಬ್ ಯಾದಗಿರಿ, ಮುಖಂಡರಾದ ನಜೀರ್ ಸಾಬ್ ಡಂಬಳ ಶ್ರೀನಿವಾಸ್ ಕಪಟಕರ, ರಫೀಕ ಕೆರಿಮನಿ, ಗೌಸ್ ಸಾಬ್ ಕಲಾವಂತ, ಜಗದೀಶ್ ತೇಲಿ, ಮುನ್ನ ಡಲಾಯತ,ಶ್ರೀನಿವಾಸ್ ಬಾರ ಬಾರ ಬಾಬಾಜಾನ್ ಕೋಳಿವಾಡ, ಮೈನು ಅತ್ತಾರ್, ಇನ್ನು ಅನೇಕರು ಭಾಗವಹಿಸಿದ್ದಾರೆ.
ವರದಿ: ವೀರೇಶ್ ಗುಗ್ಗರಿ