ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿಯಂತ್ರಣ ಕಾರ್ಯಕ್ರಮಗಳು ….

 

 

 

ಬೆಳ್ಳಟ್ಟಿ. ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಟ್ಟಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಗದಗ್ ಜಿಲ್ಲಾ ಅಂದತ್ವ ನಿಯಂತ್ರಣ ಕಾರ್ಯಕ್ರಮಗಳು ಗದಗ್ ತಾಲೂಕು ತಿಮ್ಮರೆಡ್ಡಿ ಮರೆಡ್ಡಿ ಇವರ ಸ್ನೇಹ ಬಳಗ ಪ್ರಜಾ ಚೈತನ್ಯ ಫೌಂಡೇಶನ್ ಬೆಳ್ಳಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ದಿವಂಗತ ಹನುಮರೆಡ್ಡಿ ಸೋಮರೆಡ್ಡಿ ಮರಡ್ಡಿ ಇವರ ಸ್ಮರಣಾರ್ಥವಾಗಿ ಉಚಿತ ನೇತ್ರ ತಪಾಸಣಾ ಹಾಗೂ ಶಾಸ್ತ್ರ ಚಿಕಿತ್ಸಾ, ಶಿಬಿರ ಕಾರ್ಯಕ್ರಮವು ಬೆಳ್ಳಟ್ಟಿಯ ದೇವಮ್ಮ ದೇವಿ ದೇವಸ್ಥಾನ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ತಿಮ್ಮರೆಡ್ಡಿ ಅವರು ಆರ್ಥಿಕವಾಗಿ ತೀರ ಹಿಂದುಳಿದ ಬಡ ಕುಟುಂಬಗಳಿಗೆ ಈ ಕಾರ್ಯಕ್ರಮ ಅನುಕೂಲವಾಗಲಿದೆ. ಶಿಬಿರದಲ್ಲಿ ಭಾಗವಹಿಸಿ ಶಸ್ತ್ರ ಚಿಕಿತ್ಸೆಗೆ ಅರ್ಹರಾದರೇ ಅವರನ್ನು ಶಿವಮೊಗ್ಗಕ್ಕೆ ಕಳುಹಿಸಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು. ಬಡವರು ತೀರಾ ಆರ್ಥಿಕವಾಗಿ ಹಿಂದುಳಿದವರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದನಾಗರಾಜ ಕುಲಕರ್ಣಿ, ಮೋಹನ ಗುತ್ತೆಮ್ಮಾನವರ, ಕೊಟ್ರೆಶ ಸಜ್ಜನರ,ಮಹೇಶ ಬಡ್ನಿ, ಸುರೇಶ ಭ್ಯಾಲಹುನಶಿ,ಹೇಮಂತರೆಡ್ಡಿ ಅಳವಂಡಿ, ಯಲ್ಲಪ್ಪ ಒಳಗೇರಿ, ಗಿರೀಶ್ ರೆಡ್ಡಿ ಮೇಕಳಿ. ವೆಂಕಣ್ಣ ಡಂಬಳ, ವೆಂಕಟೇಶ ಬಸವ ರೆಡ್ಡಿ, ವಿಶ್ವನಾಥ ದಲಾಲಿ, ರಾಜೀವ ಮಾಂಡ್ರೆ, ಪರಸರಡ್ಡಿ ಮರಡ್ಡಿ, ಮಂಜುನಾಥ ಮಾಚೇನಹಳ್ಳಿ, ಪರಮೇಶಪ್ಪ ಕೋಡಿಹಳ್ಳಿ, ಯಲ್ಲನಗೌಡ ಪಾಟೀಲ, ಶ್ರೀನಿವಾಸ ಮರಡ್ಡಿ, ಸುರೇಶ್ ಬೇಂದ್ರೆ, ಅಶೋಕ ಬಾವನೂರ,ಸುನಿಲ ಬಣಗಾರ, ಚನ್ನವೀರಪ್ಪ ಸಜ್ಜನರ್ ಪರಮೇಶಪ್ಪ ಬೂದಿಹಾಳ, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

 ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!