ಕುಕನೂರು : ತಾಲೂಕಿನ ತಳಕಲ್ ಗ್ರಾಮದಲ್ಲಿರುವ ಶ್ರೀ ಫಕ್ಕೀರಸ್ವಾಮಿ ಹಜರತ್ ಹುಸೇನಷಾವಲಿ ದರಗಾ ಉರುಸು ಷರೀಫ್ (ತಳಕಲ್ ಉರುಸು) ಕಾರ್ಯಕ್ರಮವನ್ನು ಇಂದಿನ ನೆಡೆಯಲಿದೆ.
ಏ.10 ರಂದು ಸೋಮವಾರ ಗಂಧ.
ಏ.11 ರಂದು ಮಂಗಳವಾರ ಉರುಸು.
ಏ.12 ರಂದು ಬುಧವಾರ ಜಿಯಾರತ್.
ಸೋಮವಾರ ರಾತ್ರಿ ಸುಮಾರು 3 ಗಂಟೆಗೆ ವಿವಿಧ ಭಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಹಾಲುಮತ ಕುಟುಂಬದಿಂದ ಗಂಧ ತರಲಾಗುತ್ತದೆ. ನಂತರ ಮಂಗಳವಾರ ಬೆಳಗಿನ ಜಾವದಿಂದ ಉರುಸು ಪ್ರಾರಂಭವಾಗಲಿದೆ.
ಮಂಗಳವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಿವಾಯತ್ ಹಾಗೂ ಕವಾಯತ್‌ಗಳು ಮತ್ತು ವಿವಿಧ ಭಾಜಾ ಭಜಂತ್ರಿಗಳ ಜುಗಲ್ ಬಂದಿ,ಜಿಯಾರತ್ ಎಂಬ ಕಾರ್ಯಕ್ರಮಗಳು ನೆಡೆಯಲಿವೆ.
ಹೀಗೆ ಮೂರು ದಿನಗಳ ಕಾಲ ತಳಕಲ್ ಗ್ರಾಮದಲ್ಲಿ ಹಿಂದು- ಮುಸ್ಲಿಂ ಬಾಂದವರಿಂದ ಭಾವೈಕ್ಯತೆಗೆ ಹೆಸರಾಗಿ ಉರುಸು ಕಾರ್ಯಕ್ರಮ ನೆಡೆಯಲಿದೆ. ಈ ಉರಿಸಿಗೆ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಸಾವಿರಾರು ಜನ ಆಗಮಿಸಿ ತಮ್ಮ ಹರಕೆೆಗಳನ್ನು ತೀರಿಸುತ್ತಾರೆ.
ಏ. 10 ರಿಂದ 12ರವರೆಗೆ ತಳಕಲ್ ನ ಹಜರತ್ ಹುಸೇನಷಾವಲಿ ದರಗಾ ಉರುಸು
