ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಬಿಗ್ ಶಾಕ್ ಕಾದಿದೆ. ಈ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣೆಗೆ ಚುನಾವಣಾ ಆಯೋಗ ಅನುಮತಿ ನೀಡಲು ನಿರಾಕರಿಸಿದೆ ಎಂದು ತಿಳಿದು ಬಂದಿದೆ. ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ನಡೆದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ, ‘ಶಿಕ್ಷಕರ ವರ್ಗಾವಣೆಗೆ ಆಯೋಗದ ಅನುಮತಿ ಕೋರಿ ಬಳಿಕ ಪ್ರಕ್ರಿಯೆ ನಡೆಸಲು ತೀರ್ಮಾನಿಸಿತ್ತು. ಆದರೆ ಚುನಾವಣಾ ಆಯೋಗ ನೀತಿ ಸಂಹಿತೆ ಪ್ರಸ್ತಾಪಿಸಿಲಾಗಿದೆ. ರಾಜ್ಯ ಶಿಕ್ಷಕರ ವರ್ಗಾವಣೆಗೆ ಅನುಮತಿ ನಿರಾಕರಿಸಿ ಮೌಖಿಕವಾಗಿ ಸೂಚಿಸಿದೆ ಎಂದು ಮಾಹಿತಿ ಇದೆ. ಆದ್ದರಿಂದ ಹೊಸ ಸರ್ಕಾರ ರಚನೆಯಾಗುವವರಿಗೂ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಶಿಕ್ಷಕರಿಗೆ ಇಲ್ಲ ಎಂಬುದು ಖಚಿತವಾಗಿದೆ.
ಇನ್ನು ಇತ್ತೀಚೆಗೆ ಶಿಕ್ಷಕ ವೃತ್ತಿಗೆ ಆಯ್ಕೆಯಾಗಿ ನೇಮಕಾತಿ ಆದೇಶ ಪಡೆಯಲು ಕಾಯುತ್ತಿರುವ ಭಾವೀ ಶಿಕ್ಷಕರಿಗೂ ನೀತಿ ಸಂಹಿತೆ ಸಂಕಷ್ಟ ತಂದಿದೆ. ಈ ಹಿಂದೆ 15 ಸಾವಿರ ಶಿಕ್ಷಕರ ನೇಮಕಾತಿ ವಿಚಾರ ಕೋರ್ಟ್ ನಲ್ಲಿದ್ದರೂ, ಈ ವಿಚಾರದ ಹೊರತಾಗಿ ನೇಮಕಗೊಡಿರುವ ಇತರೆ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲು ಶಿಕ್ಷಣ ಇಲಾಖೆ ಆದೇಶ ನೀಡಿದ ಮೇಲೆ ಅವರಿಗೆ ತರಬೇತಿ ನೀಡಿಲಾಗುತ್ತದೆ. ಹಾಗಾಗಿ ಶಿಕ್ಷಕರ ವರ್ಗಾವಣೆ ಬಳಿಕ ಉಳಿಕೆಯಾಗುವ ಸ್ಥಳಗಳಿಗೆ ಸ್ಥಳ ನಿಯುಕ್ತಿ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಆದರೆ, ವರ್ಗಾವಣೆ ಪ್ರಕ್ರಿಯೆ ನಡೆಯದ ಕಾರಣ ಸ್ಥಳ ನಿಯುಕ್ತಿ ಮಾಡುವುದೂ ಕಷ್ಟವಾಗಿದೆ ಎಂದು ಕೆಲ ಮೂಲಗಳ ಪ್ರಕಾರ ಮಾಹಿತಿ ಹೊರಬಿದ್ದಿದೆ.