ಇಟಗಿಯಲ್ಲಿ ಕಲ್ಲಯ್ಯಜ್ಜನವರ 2043ನೇ ತುಲಾಭಾರ


ಕುಕನೂರು : ತಾಲೂಕಿನ ಇಟಿಗಿ ಗ್ರಾಮದ ಶ್ರೀ ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ರವಿವಾರ ನಡೆದ ಬಾಳೆದಿಂಡಿನ ಕಾರ್ಯಕ್ರಮದಲ್ಲಿ ಗದಗಿನ ವೀರೇಶ್ವರ ಪುಣ್ಯಶ್ರಮದ ಶ್ರೀ ಕಲ್ಲಯ್ಯನವರ 2043ನೇ ತುಲಾಭಾರವನ್ನು ನೆರವೇರಿಸಲಾಯಿತು.

ಗ್ರಾಮದಲ್ಲಿ ಗಾಳಿದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ಬಾಳೆ ದಿಂಡಿನ ಕಾರ್ಯಕ್ರಮದ ಪ್ರಯುಕ್ತ, ಗದಗಿನ ವೀರೇಶ್ವರ ಪುಣ್ಯಶ್ರಮದ ಪೂಜ್ಯರಾದ ಶ್ರೀ ಕಲ್ಲಯ್ಯನವರ 2043ನೇ ತುಲಾಭಾರ ಕಾರ್ಯಕ್ರಮವನ್ನು, ದೇವಸ್ಥಾನದ ಸೇವಾ ಸಮಿತಿ ವತಿಯಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ತುಲಾಭರ ಕಾರ್ಯಕ್ರಮವನ್ನು ಸ್ವೀಕರಿಸಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಾಂತಪ್ಪ ಬೆಲ್ಲದ, ರುದ್ರಮುನಿ ಮಠಪತಿ, ಅಣ್ಣಪ್ಪ ಅಂಗಡಿ, ಹನುಮರೆಡ್ಡಿಪ್ಪ ದೇಸಾಯಿ, ಲಕ್ಷ್ಮಣ್ ಕೋರಿ, ಅಶೋಕ್ ಸಾದರ, ಸುರೇಶ್ ಮಂಡಲಗೇರಿ, ನಿಂಗಪ್ಪ ಕೋರಿ, ಶಿವಪ್ಪ ಗುಳಗಣ್ಣವರ, ವಜೀರ್ ಸಾಬ್ ತಳಕಲ್ ಹಾಗೂ ಇತರರು ಇದ್ದರು

Leave a Reply

error: Content is protected !!