ಕುಕನೂರು :ತಾಲೂಕಿನ ವಿರಾಪುರ ಗ್ರಾಮದ ಮಲ್ಲೇಶ ತಂದೆ ಗಾಳೆಪ್ಪ ಹೊಸಮನಿ (22) ಮೃತ ಪಟ್ಟಿರುತ್ತಾನೆ.
ಶುಕ್ರವಾರ ಸಂಜೆ ಹೊಲದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಮಳೆ ಬಂದಿದ್ದು ಇದೆ ಸಮಯದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
22 ವರ್ಷದ ಮಲ್ಲೇಶ ವಿಜಯಪುರ ವಿಶ್ವ ವಿದ್ಯಾಲಯದಲ್ಲಿ ಎಮ್.ಎ ವಿದ್ಯಾಭ್ಯಾಸ ಮಾಡುತ್ತಿದ್ದು, ಚುನಾವಣೆಯ ಸಲುವಾಗಿ ಊರಿಗೆ ಬಂದಿದ್ದನಂತೆ. ಎರಡು ದಿನ ಕಾಲೇಜಿಗೆ ರಜೆ ಇರುವ ಕಾರಣ ಸೋಮವಾರ ಮತ್ತೆ ಕಾಲೇಜಿಗೆ ಹೋಗುವ ತಯಾರಿಯಲ್ಲಿ ಇದ್ದ ಎಂದು ಹೇಳಲಾಗುತ್ತಿದೆ.