ಕೊಪ್ಪಳ : ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯು 2022-23ನೇ ಸಾಲಿನ SSLC ಫಲಿತಾಂಶ 100 ರಷ್ಟು ಆಗಿರುತ್ತದೆ ಎಂದು ವಸತಿ ಶಾಲೆ ಪ್ರಾಂಶುಪಾಲರು ತಿಳಿಸಿದ್ದಾರೆ.
SSLC ಪರೀಕ್ಷೆಗೆ ವಸತಿ ಶಾಲೆಯ 57 ವಿದ್ಯಾರ್ಥಿಗಳು ವಿದ್ಯಾರ್ಥಿಗಳಲ್ಲಿ 28 ಡಿಸ್ಟಿಂಕ್ಷನ್ ಹಾಗೂ 29 ವಿದ್ಯಾರ್ಥಿಗಳು ಪ್ರಥಮ ದರ್ಜೆ ಸ್ಥಾನ ಪಡೆಯುವ ಮೂಲಕ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇದರಲ್ಲಿ ಪ್ರಥಮ ಸ್ಥಾನ ವೆಂಕಟೇಶ ಶೇ 97.28, ದ್ವಿತೀಯ ಸ್ಥಾನ ಉಮ ತಬಕಿ ಶೇ 96.32 ಮತ್ತು ತೃತೀಯ ಸ್ಥಾನ ಶಾಹೀದ ಹೆಚ್ ಗೌಡರ್ ಶೇ 94.72 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು, ನಿಲಯಪಾಲಕರು ಮತ್ತು ಸರ್ವ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
SSLC ಫಲಿತಾಂಶ: ತಳಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉತ್ತಮ ಸಾಧನೆ
