JUST IN, BIG UPDATE : ರಾಜ್ಯ ಸರ್ಕಾರದಿಂದ ನಾಡಿನ ಜನತೆಗೆ ಮತ್ತೊಂದು ಸಿಹಿ ಸುದ್ದಿ : ಅತಿ ಶೀಘ್ರದಲ್ಲೇ..!!

You are currently viewing JUST IN, BIG UPDATE : ರಾಜ್ಯ ಸರ್ಕಾರದಿಂದ ನಾಡಿನ ಜನತೆಗೆ ಮತ್ತೊಂದು ಸಿಹಿ ಸುದ್ದಿ :  ಅತಿ ಶೀಘ್ರದಲ್ಲೇ..!!
Minister K H Muniyapaa


ಬೆಂಗಳೂರು : ರಾಜ್ಯ ಸರ್ಕಾರದಿಂದ ನಾಡಿನ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಹೊಸದಾಗಿ ಬಿಪಿಎಲ್ ಕಾರ್ಡ್ ಹೊಂದಲು ಇಚ್ಚಿಸುತ್ತಿರುವವರಿಗೆ ಮಹತ್ವದ ಸುದ್ದಿ ಇದಾಗಿದೆ. ಅತೀ ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ ಗಳ ವಿತರಣೆ ಮಾಡುವ ಸರ್ಕಾರ ಗುರಿ ಹೊಂದಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ (ಬುಧವಾರ) ಮಾಧ್ಯಮದವರೊಂದಿಎಗ ಮಾತನಾಡಿದ ಸಚಿವ ಕೆ ಹೆಚ್ ಮುನಿಯಪ್ಪ ಅವರು, ನೂತನ ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಕಾರ್ಡ್‌ಗಳನ್ನು ಆದಷ್ಟು ಬೇಗ ನೀಡುವ ಪ್ರಕ್ರಿಯೆಯನ್ನು ನಮ್ಮ ಸರ್ಕಾರ ನಡೆಸಲಿದೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ಶಿರ್ಘದಲ್ಲೇ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈಗಾಗಲೇ ಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ 3 ಲಕ್ಷ ಅರ್ಜಿಗಳು ಬಂದಿವೆ. ಇದರಲ್ಲಿ ಕೆಲವರು ಪಡಿತರ ಬೇಡ ಆರೋಗ್ಯ ಯೋಜನೆಗಳ ಲಾಭಕ್ಕಾಗಿ ಪಡಿತರ ಚೀಟಿ ನೀಡಿ ಎಂದು ಕೋರಿದ್ದಾರೆ. ಹಾಗಾಗಿ, ಇಂತಹವರಿಗೆ ಆದಷ್ಟು ಬೇಗ ಕಾರ್ಡ್ ನೀಡಲು ಅಗತ್ಯ ಕ್ರಮ ವಹಿಸಲಾಗುವುದು. ‘ಆರೋಗ್ಯ ಯೋಜನೆ’ಗಾಗಿ ಕಾರ್ಡ್ ಬಯಸಿರುವವರಿಗೆ ಬಿಪಿಎಲ್-ಎಬಿ ಎಂದು ನಮೂದಿಸಿ ಕಾರ್ಡ್ ನೀಡುವ ಚಿಂತನೆ ಸರ್ಕಾಎರ ಮಾಡಿತ್ತಿದೆ. ಇಂತಹವರಿಗೆ ಪಡಿತರ ಯೋಜನೆಯ ಲಾಭ ಇರುವುದಿಲ್ಲ. ಆದರೆ, ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ ಈ ಬಿಪಿಎಲ್‌ ಕಾರ್ಡ್‌ಅನ್ನು ಬಳಸಿಕೊಳ್ಳಬಹುದು. ಆರೋಗ್ಯ ಯೋಜನೆಗಾಗಿಯೇ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಕಾರ್ಡ್ ವಿತರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದೀಗ ರಾಜ್ಯದಲ್ಲಿ ಸದ್ಯ 1.28 ಕೋಟಿ ಬಿಪಿಎಲ್ ಪಡಿತರದಾರರಿದ್ದು, ಇವರಲ್ಲಿ 97 ಲಕ್ಷ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಹಾಗೂ 5 ಅಕ್ಕಿ ಬದಲಾಗಿ ಅಕ್ಕಿಯ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. ಉಳಿದ 30 ಲಕ್ಷ ಬಿಪಿಎಲ್ ಪಡಿತರದಾರರ ದತ್ತಾಂಶ ಮಾಹಿತಿಗಳು ಸರಿಯಿಲ್ಲ ಎಂದು ಇಲಾಖೆ ಹೇಳಿದೆ. ಅದನ್ನು ಆದಷ್ಟು ಬೇಗ ಪರಿಶೀಲಿಸಿ ಇವೆಲ್ಲವನ್ನೂ ಸರಿಪಡಿಸಿ ಉಳಿದವರಿಗೂ ಇವರಿಗೂ ಸಹ ಅನ್ನಭಾಗ್ಯ ಯೋಜನೆಯಡಿಯಲ್ಲಿ ನಗದು ವರ್ಗಾವಣೆ ಯೋಜನೆಯ ಲಾಭ ಸಿಗುವಂತೆ ಕ್ರಮವಹಿಸಲಾಗುವುದು ಎಂದರು.

ವರದಿ : ಚಂದ್ರು ಆರ್‌ ಭಾನಾಪೂರ್‌

Leave a Reply

error: Content is protected !!