BIG BREAKING : ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಶೀಘ್ರದಲ್ಲೇ ಬ್ರೇಕ್..!!

You are currently viewing BIG BREAKING : ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಶೀಘ್ರದಲ್ಲೇ ಬ್ರೇಕ್..!!

ಬೆಂಗಳೂರು : ರಾಜ್ಯ ಸರ್ಕಾರದಿಂದ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರದ ವ್ಯವಸ್ಥೆ ಕಲ್ಪಿಸುತ್ತಿದ್ದಂತೆ, ಸರ್ಕಾರಿ ಬಸ್ಸುಗಳು ತುಂಬಿ ತುಳುಕುತ್ತಿವೆ. ಅದರಲ್ಲಿ ವಾರಾಂತ್ಯಕ್ಕಂತೂ ಸಾರಿಗೆ ಬಸ್ ಗಳು ಸಿನಿಮಾ ಥಿಯೇಟರ್ ನಂತೆ ಹೌಸ್ ಪುಲ್ ಆಗುತ್ತಿವೆ. ಹೆಚ್ಚಿನ ಮಹಿಳೆಯರು ಧಾರ್ಮಿಕ ಸ್ಥಳಗಳು ಅಲ್ಲದೇ, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವುದು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ವೀಕೆಂಡ್ ನಲ್ಲಿ ಮಹಿಳೆಯರ ಓಡಾಟಕ್ಕೆ ಶೀಘ್ರದಲ್ಲೇ ಬ್ರೇಕ್ ಬೀಳಲಿದ್ದು, ಅದಕ್ಕಾಗಿ ಸರ್ಕಾರ ಹೊಸ ರೂಲ್ಸ್ ಜಾರಿಗೆ ತರಲು ಮುಂದಾಗಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ “ಶಕ್ತಿ ಯೋಜನೆ”ಯನ್ನು ಕಳೆದ ತಿಂಗಳ ಜೂನ್.11ರಂದು ಜಾರಿಗೊಳಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ನಾಲ್ಕು ಸಾರಿಗೆ ನಿಗಮಗಳಲ್ಲಿ ರಾಜ್ಯಾಧ್ಯಂತ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.


ಈ ಉಚಿತ ಸಂಚಾರ ವ್ಯವಸ್ಥೆಯ ಅನುಕೂಲದಿಂದಾಗಿ ಮಹಿಳೆಯರು ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಧಾರ್ಮಿಕ ಸ್ಥಳ, ಪ್ರವಾಸಿ ಸ್ಥಳ ಸೇರಿದಂತೆ ವಿವಿಧೆಡೆ ಸಂಚಾರ ಮಾಡುತ್ತಿದ್ದಾರೆ. ಪ್ರತಿ ವೀಕೆಂಟ್ ನಲ್ಲಿಯೂ ಬಸ್ಸುಗಳು ಮಹಿಳೆಯರಿಂದ ರಶ್‌ ಆಗುತ್ತಿದೆ.

ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯ ದರ್ಬಾರ್ ನಿಂದ ಕಾರಣಕ್ಕಾಗಿ ತಿಂಗಳಾಂತ್ಯದ ಒಳಗೆ “ಶಕ್ತಿ ಯೋಜನೆ”ಗೆ ಹೊಸ ರೂಲ್ಸ್ ಅನ್ನು ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಈ ಶಕ್ತಿ ಯೋಜನೆಯ ಷರತ್ತುಗಳನ್ನು ಮಾರ್ಪಡಿಸಿ, ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಜಾರಿಗೊಳಿಸೋ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೇಳೆ ವೀಕೆಂಡ್ ನಲ್ಲಿ ಮಹಿಳೆಯರ ಸಂಚಾರಕ್ಕೆ ಯಾವೆಲ್ಲಾ ನಿಯಮ ಜಾರಿಗೊಳಿಸುತ್ತಾರೆ ಎಂಬುದನ್ನು ಸ್ವಲ್ಪ ಕಾದು ನೋಡಬೇಕಿದೆ.

Leave a Reply

error: Content is protected !!