BIG NEWS : SSLC ಹಾಗೂ ದ್ವಿತೀಯ PUC ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ..!!

You are currently viewing BIG NEWS : SSLC ಹಾಗೂ ದ್ವಿತೀಯ PUC ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ..!!

ಬೆಂಗಳೂರು : 2023-24ನೇ ಈ ಸಾಲಿನ SSLC ಹಾಗೂ ದ್ವಿತೀಯ PUC ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಇಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2023-24 ಸಾಲಿನ SSLC ಪರೀಕ್ಷೆ-1ಯು 2024ರ ಮಾರ್ಚ್ 25ರಿಂದ ಆರಂಭಗೊಂಡು, ಏಪ್ರಿಲ್ 06ರಂದು ಕೊನೆಗೊಳ್ಳಲಿದೆ. ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1 ಮಾರ್ಚ್ 02 ಆರಂಭಗೊಂಡು, ಮಾರ್ಚ್ 22ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

ರಾಜ್ಯದ ‘ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ತಮ್ಮ ಶಾಲಾ/ಕಾಲೇಜುಗಳ “ಪ್ರಕಟಣಾ ಫಲಕದಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದೆ.

SSLC ವಾರ್ಷಿಕ ಪರೀಕ್ಷೆ-1ರ ವೇಳಾಪಟ್ಟಿ

ದಿನಾಂಕ 02-03-2024 ಶನಿವಾರ – ಕನ್ನಡ, ಅರೇಬಿಕ್
ದಿನಾಂಕ 03-03-2024 ಸೋಮವಾರ – ಇತಿಹಾಸ, ಭೌತಶಾಸ್ತ್ರ
ದಿನಾಂಕ 05-03-2024 ಮಂಗಳವಾರ – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್
ದಿನಾಂಕ 06-03-2024 ಬುಧವಾರ – ಸಮಾಜ ಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ದಿನಾಂಕ 07-03-2024 ಗುರುವಾರ – ಹಿಂದಿ
ದಿನಾಂಕ 09-03-2024 ಶನಿವಾರ – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ದಿನಾಂಕ 11-03-2024 ಸೋಮವಾರ – ಇಂಗ್ಲೀಷ್
ದಿನಾಂಕ 12-03-2024 ಮಂಗಳವಾರ – ತೆಲುಗು, ತಮಿಳು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ದಿನಾಂಕ 13-03-2024 ಬುಧವಾರ – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ದಿನಾಂಕ 14-03-2024 ಗುರುವಾರ – ಗಣಿತ, ಶಿಕ್ಷಣ ಶಾಸ್ತ್ರ
ದಿನಾಂಕ 16-03-2024 ಶನಿವಾರ – ಭೂಗೋಳಶಾಸ್ತ್ರ, ಜೀವಶಾಸ್ತ್ರ
ದಿನಾಂಕ 18-03-2024 ಸೋಮವಾರ – ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ.
ದಿನಾಂಕ 20-03-2024 ಬುಧವಾರ – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹವಿಜ್ಞಾನ.
ದಿನಾಂಕ 22-03-2024 ಶುಕ್ರವಾರ – ಅರ್ಥಶಾಸ್ತ್ರ.

 

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ವೇಳಾಪಟ್ಟಿ

  • ದಿನಾಂಕ 25-03-2024 ಸೋಮವಾರ – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (NCRTC), ಸಂಸ್ಕೃತ
  • ದಿನಾಂಕ 27-03-2024 ಬುಧವಾರ – ಸಮಾಜ ವಿಜ್ಞಾನ
  • ದಿನಾಂಕ 30-03-2024 ಶನಿವಾರ – ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ
  • ದಿನಾಂಕ 02-04-2024 ಮಂಗಳವಾರ – ಗಣಿತ, ಸಮಾಜ ಶಾಸ್ತ್ರ
  • ದಿನಾಂಕ 03-04-2024 ಬುಧವಾರ ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ IV, ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2. ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ANSI ‘C’, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
  • ದಿನಾಂಕ 04-04-2024 ಗುರುವಾರ – ಹಿಂದಿ(NCERT), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು. ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್, ಅಪರೆಲ್ಸ್ ಮೇಡ್ ಆಪ್ ಅಂಡ್ ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ ವೇರ್.
  • ದಿನಾಂಕ 06-04-2024 ಶನಿವಾರ – ದ್ವಿತೀಯ ಭಾಷೆ- ಇಂಗ್ಲೀಷ್, ಕನ್ನಡ

Leave a Reply

error: Content is protected !!