ಉತ್ತರಾಖಂಡ : ದೇಶದ ಉತ್ತರ ಭಾಗದಲ್ಲಿ ವರುಣನ ರೌದ್ರಾವತಾರ ತಾಳಿದ್ದು, ದೇವಭೂಮಿ ಉತ್ತರಾಖಂಡನಲ್ಲಿ ಮಳೆಯ ಆರ್ಭಟಕ್ಕೆ ಗುಡ್ಡ ಕುಸಿದು ಸ್ಥಳದಲ್ಲಿಯೇ 5 ಜನರು ಮೃತಟ್ಟಿಪ್ಪಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇಲ್ಲಿವರೆಗೆ 50 ಸಾವು ಸಂಭವಿಸಿವೆ ಎಂದು ವರದಿಯಾಗಿದೆ.
ನಿನ್ನೆ ತಡರಾತ್ರಿ ಕಾರ್ ಟೆಂಪೋ ಮೇಲೆ ಗುಡ್ಡ ಕುಸಿತ ಉಂಟಾಗಿದ್ದು, ಈ ಘಟನೆಯಲ್ಲಿ ಉತ್ತರ ಕಾಶಿಯತ್ತ ತೆರಳುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿತದಿಂದ ಬೃಹತ್ ಗಾತ್ರದ ಬಂಡೆ ಗಲ್ಲುಗಳು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ 5 ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಲ್ಲಿನ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದ್ದು, ಗುಡ್ಡ ಕುಸಿದ ಪರಿಣಾಮ ದೊಡ್ಡ ದೊಡ್ಡ ಬಂಡೆಗಳು ಎಲೆಯಂತೆ ಉರುಳಿ ರಸ್ತೆಯ ಮೇಲೆ ಬಿದ್ದಿವೆ. ಕ್ಷಣ ಕಾಲ ವಾಹನ ಸವಾರರು ಭಯ ಭೀತಾರಾಗಿದ್ದರು. ಆದರೆ ಕ್ಷಣ ಮಾತ್ರದಲ್ಲಿ ಅನೇಕರು ಪರಾಗಿದ್ದಾರೆ ಎಂದು ಪೊಲೀಸ್ ಮಾಹಿತಿಯಿಂದ ತಿಳಿಸಿದ್ದಾರೆ.