ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಇದೀಗ ಅಂತ್ಯ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ “ಉಪನಗರ ಅಭಿವೃದ್ಧಿ”ಯಂತ ಕ್ರಮವಹಿಸಲು ನಿರ್ಧಾರ ತಗೆದುಕೊಂಡಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ಧರಾಮಯ್ಯ, ‘ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆಗೊಳಿಸಲು ನಗರದ ಹೊರವಲಯದಲ್ಲಿ ಜನರು ಪ್ರತಿದಿನ ಪ್ರಯಾಣಿಸಲು ಅನುಕೂಲವಾಗುವಂತೆ ರಸ್ತೆ, ರೈಲು ಸಂಪರ್ಕದೊಂದಿಗೆ ಉಪನಗರಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿಗಳಲ್ಲಿ ಉಪನಗರ ಟೌನ್‍ಶಿಪ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
“ಇನ್ನೂ ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು, ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ” ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ” ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆ ಸಿಲಿಕಾನ್ ಸಿಟಿ ಬೆಂಗಳೂರಿನ ಜನದಟ್ಟಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಪನಗರ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಉಪ ನಗರಗಳಲ್ಲೇ ಜನರ ವಾಸ, ಉದ್ಯೋಗದ ಕ್ರಮವಹಿಸೋದಕ್ಕೆ ಮಹತ್ವದ ಹೆಜ್ಜೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಹಿಸುತ್ತಿದೆ ಎಂದು ಸಿಎಂ ಹೇಳಿದ್ದಾರೆ.
ಪ್ರಜಾವೀಕ್ಷಣೆ ನ್ಯೂಸ್ youtube ಚಾನೆಲ್ subscribe ಮಾಡಿ, ಬೆಲ್ ಬಟನ್ ಒತ್ತಿ, ಲೈಕ್ ನೀಡಿ, ಶೇರ್ ಮಾಡಿ.*👇https://www.youtube.com/@prajavikshanenews
Instagram ನಲ್ಲಿ ಫಾಲೋ ಮಾಡಿ 🙏 👇
prajavikshane_news_official
Twitter ನಲ್ಲಿ ನಮ್ಮನ್ನು ಫಾಲೋ ಮಾಡಿ 👇
Facebookನಲ್ಲಿ ನಮ್ಮನ್ನು ಫಾಲೋ ಮಾಡಿ 👇 https://www.facebook.com/profile.php?id=100091514597754&mibextid=b06tZ0
Whats App ಗ್ರೂಪ್ ಜಾಯಿನ್ ಆಗಿ 👇 https://chat.whatsapp.com/LBFgoUlLpua8ftjSCo0eiJ
Telegram ಗ್ರೂಪ್ ಜಾಯಿನ್ ಆಗಿ 👇
https://t.me/+TUcq7yRTDk1jNjdl
ನಿಮ್ಮ ಸುತ್ತಮುತ್ತಲಿನ ಸುದ್ದಿ ಹಾಗೂ ಆಸಕ್ತಿದಾಯಕ ವಿಷಯಗಳನ್ನು ನಮ್ಮದೊಂದಿಗೆ ಹಂಚಿಕೊಳ್ಳಿ, ನೀವು ವರದಿಗಾರರು ಆಗಬೇಕಾ ಹಾಗಾದ್ರೆ ಕೂಡಲೇ ನಮ್ಮನ್ನು ಸಂಪರ್ಕಿಸಿ…
“ಪ್ರಜಾವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮದ
ಸಂಪಾದಕರು
ಚಂದ್ರು ಆರ್ ಭಾನಾಪುರ
ಫೋನ್ ನಂಬರ್
9538631636