ಚಂದ್ರಯಾನ 3ರ ಅಪರೂಪದ ಚಿತ್ರಗಳನ್ನು ಹಂಚಿಕೊಂಡ ಇಸ್ರೋ.
ಚಂದ್ರಯಾನ 3ರ ಆಂತರಿಕ್ಷಯಾನದ ಯಶಸ್ವಿಯ ಸನಿಹದಲ್ಲಿರುವ ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ ಚಂದ್ರಯಾನ 3 ಸೆರೆ ಹಿಡಿದ ಅಪರೂಪದ ಚಿತ್ರಗಳನ್ನು ತನ್ನ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ ( ಟ್ವಿಟ್ಟರ್ ) ನಲ್ಲಿ ಹಂಚಿಕೊಂಡಿದೆ.
ಚಂದ್ರಯಾನ 3 ರ ಲ್ಯಾಂಡ್ ರ್ ಗೆ ಅಳವಡಿಸಿದ ಎಲ್ ಎಚ್ ಡಿ ಎ ಸಿ ತಂತ್ರಜ್ಞಾನದ ಕ್ಯಾಮೆರಾ ಸೆರೆಹಿಡುದಿರುವ ಚಿತ್ರಗಳನ್ನು ಇಸ್ರೋ ಶೇರ್ ಮಾಡಿದೆ.
ಇದೇ ಆಗಸ್ಟ್ 23 ರಂದು ಚಂದ್ರಯಾನ 3 ಲ್ಯಾಂಡ್ ಅಗಲಿದ್ದು ಭಾರತೀಯ ಬಾಹ್ಯಕಾಶ ಇತಿಹಾಸದಲ್ಲಿ ಮೈಲುಗಲ್ಲು ಎಣಿಸಲಿದೆ. ಸುಮಾರು ಐವತ್ತು ವರ್ಷಗಳ ಭಾರತೀಯ ವಿಜ್ಞಾನಿಗಳ ಕನಸು ನನಸಾಗುವ ಕಾಲ ಸನಿಹವಾಗಿದೆ. ಆ ದಿನಕ್ಕೆ ಭಾರತೀಯರೆಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.