ಗಂಗಾವತಿ : ನಗರದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾಧ್ಯಕ್ಷ ಸಿ ಕೆ ಮರಿಸ್ವಾಮಿ ಅವರ ನೇತೃತ್ವದಲ್ಲಿ ಹಾಗೂ ದಲಿತ ಸಂಘಟನೆಯ ವತಿಯಿಂದ ಇಂದು ಗಂಗಾವತಿಯ ನ್ಯಾಯಾಲಯದ ಮುಂಭಾಗಲ್ಲಿರುವ ಭಾರತರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ವೃತ್ತದ ಬಳಿ ಮೈಸೂರು ಆಳಿದ ಆದಿ ದ್ರಾವಿಡ. ಚಕ್ರವರ್ತಿ ಮಹಿಷ ದೊರೆ ಮಹಿಶೋತ್ಸವಕ್ಕೆ ಹಾಗೂ ಮಹಿಷ ದಸರಾ ಆಚರಣೆಮಾಡಲಾಯಿತು.
ಈ ವೇಳೆ ಮಾತನಾಡಿದ ಸಿ ಕೆ ಮರಿಸ್ವಾಮಿ, “ಚರಿತ್ರೆಯಲ್ಲಿ ಬುದ್ಧಿ ಜೀವಿಗಳು ಪ್ರಗತಿಪರ ಚಿಂತಕರು ಇತಿಹಾಸ ಉದ್ದಕ್ಕೂ ಮಹಿಷ ಒಬ್ಬ ರಕ್ಷಕರಾಜ ಮೈಸೂರು ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಆಡಳಿತ ನಡೆಸಿದ ಒಬ್ಬ ರಾಜ ಆದರೆ ಆರ್ಯರ ಆಗಮನದಿಂದ ಒಬ್ಬ ರಾಜನನ್ನು ರಾಕ್ಷಸನೆಂದು ಬಿಂಬಿಸಿ ಈ ದೇಶದ ಮೂಲ ನಿವಾಸಿಗಳನ್ನು ಗುಲಾಮರನ್ನಾಗಿ ಮಾಡಲು ಕೆಲವು ಪಿತೂರಿಗಳನ್ನು ಹೂಡಿ ಇತಿಹಾಸವನ್ನು ತಿರುಚಿ ಕಥೆ ಪುರಾಣಗಳಲ್ಲಿ ಕಾಲ್ಪನಿಕವಾಗಿ ಬಿಂಬಿಸಿ ರಾಜನನ್ನು ರಾಕ್ಷಸನೆಂದು ಮೂಲ ನಿವಾಸಿಗಳ ತಲೆಯಲ್ಲಿ ಸೃಷ್ಟಿಮಾಡಿ ತುಂಬಿದರು ಇದೆ ಸಾಂಪ್ರದಾಯಕವಾಗಿ ಮುಂದುವರೆಯುತ ಬಂದಿತು.
ಇದರ ಬಗ್ಗೆ ಇತಿಹಾಸಕಾರರು ಸಂಪೂರ್ಣ ಅಧ್ಯಯನ ಮಾಡಿ ರಾಕ್ಷಸನೆಂದು ಬಿಂಬಿಸಿದ ಮಹಿಷನನ್ನು ರಾಜನೆಂದು ನಾಡ ದೊರೆಯೆಂದು ನಾಡಿನ ಜನರಿಗೆ ತೋರಿಸಿಕೊಟ್ಟರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದಂತೆ ಇತಿಹಾಸ ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು ಎನ್ನುವುದಕ್ಕೆ ಇದು ಒಂದು ನೈಜ್ಯ ಸಾಕ್ಷಿಯಾಗಿದೆ ಎಂದು ಸಿಕೆ ಮರಿಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಸುರೇಶ್ ಅಶೋಕ್ ಕಟ್ಟಿಮನಿ ಅಶೋಕ ಕಟ್ಟಿಮನಿ ಸುಂಕಪ್ಪ ಬೋವಿ ದೇವಣ್ಣ ಉಲ್ಲೇಶಪ್ಪ ಮೌನೇಶ್ ಅನಿಲ್ ಮಾರುತಿ ರಾಜಕುಮಾರ ಶಂಕರ ಸುರೇಶ್ ಗಾಂಧಿನಗರ ಪಾಲ್ಗೊಂಡಿದ್ದರು.