ಬೆಳಗಾವಿ : ಕಾಂಗ್ರೆಸ್ ನೆತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿನ “ಗೃಹಲಕ್ಷ್ಮಿ ಯೋಜನೆ“ಯೂ ಒಂದಾಗಿದೆ. ಈ ಯೋಜನೆಗೆ ಆಗಸ್ಟ್.30ರ ಬಳಿಕ ನೋಂದಾಯಿಸಿಕೊಂಡ ಯಜಮಾನಿ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರ ನೀಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್, ‘ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಆಗೋದು ಸ್ವಲ್ಪ ತಡವಾಗಿರೋ ಕಾರಣ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡೋದು ತಡವಾಗಿತ್ತು. ಇದಲ್ಲದೇ ಕೆವೈಸಿ ಅಪ್ ಡೇಟ್ ಇಲ್ಲದೇ ಇರೋದು, ತಾಂತ್ರಿಕ ಸಮಸ್ಯೆಗೂ ಕಾರಣವಾಗಿತ್ತು ಎಂದರು.
BIG NEWS : ಚಳಿಗಾಲದ ವಿಧಾನಮಂಡಲದ ಅಧಿವೇಶನವು ಡಿ. 4 ರಿಂದ ಆರಂಭ..!!
ಇನ್ಮುಂದೆ ಆರ್ಥಿಕ ಇಲಾಖೆಯಿಂದ ನಿಗದಿ ಪಡಿಸಲಾಗಿರುವ ವೇಳಾಪಟ್ಟಿಯಂತೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಹಣ ಜಮಾ ಆಗಲಿದೆ. ಅದರ ಜೊತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಕೂಡ ಪ್ರತಿ ತಿಂಗಳು 15 ರಿಂದ 20ರ ಒಳಗಾಗಿ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ 2000 ಹಣ ಡಿಬಿಟಿ ಮೂಲಕ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು.
RAIN ALERT : ರಾಜ್ಯದಲ್ಲಿ ಮುಂದಿನ 4 ದಿನಗಳ ಕಾಲ ಭಾರಿ ಮಳೆ..!
ಅದು ಅಲ್ಲದೇ ಆಗಸ್ಟ್.30ರ ಬಳಿಕ “ಗೃಹಲಕ್ಷ್ಮೀ ಯೋಜನೆ”ಗೆ ನೋಂದಾಯಿಸಿಕೊಂಡ ಯಜಮಾನಿ ಮಹಿಳೆಯರಿಗೆ ಈಗಾಗಲೇ ಒಂದು ಕಂತಿನ ಹಣ ಜಮಾ ಆಗಿದೆ. ಇನ್ನೂ ಬಾರದೇ ಇರೋದು ನಮಗೆ ಹಣ ಬಂದಿಲ್ಲ ಅಂತ ಚಿಂತಿಸೋದು ಬೇಡ, ಬ್ಯಾಂಕ್ ಗೂ ಅಲೆಯೋದು ಬೇಡ. 2 ತಿಂಗಳ ಗೃಹಲಕ್ಷ್ಮೀ ಯೋಜನೆಯ 4000 ಹಣವನ್ನು ಒಟ್ಟಿಗೆ ಜಮಾ ಆಗಲಿದೆ ಎಂದು ಹೇಳಿದ್ದಾರೆ.