ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪ್ರತಿಷ್ಠಿತ (ಐಸಿಸಿ) ಕ್ರಿಕೆಟ್ ವಿಶ್ವಕಪ್ 2023 ತನ್ನ ಮುಕ್ತಾಯದತ್ತ ಸಾಗಿದ್ದು, ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಹಮದಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 240 ರನ್ ಕಲೆಹಾಕಿದೆ.
ಭಾರತದ ಪರ ವಿರಾಟ್ ಕೊಹ್ಲಿ 54 ರೋಹಿತ್ 47 ರಾಹುಲ್ 66 ರನ್ ಕಲೆಹಾಕಿದರು. ಆಸ್ಟ್ರೇಲಿಯಾ ಪರ ಸ್ಟಾರ್ಕ್ 3, ಕಮ್ಮಿಂಗ್ಸ್ 2, ಜೋಶ್ ಹ್ಯಾಝಲ್ವುಡ್ 2 ನ್ ಮ್ಯಾಕ್ಸ್‌ವೆಲ್ 1 ವಿಕೆಟ್ ಪಡೆದರು.